ಚಂಡಿಗಢದಲ್ಲಿ ಟೈಲರ್ ಮನೆ ಮೇಲೆ ಇಡಿ ದಾಳಿ, 30 ಲಕ್ಷ ನಗದು, 2.5 ಕೆಜಿ ಚಿನ್ನ ಜಪ್ತಿ

ನೋಟ್ ನಿಷೇಧದ ನಂತರ ಅಕ್ರಮವಾಗಿ ಹಣ ಸಂಗ್ರಹಿಸಿಟ್ಟಿರುವವರ ವಿರುದ್ಧ ದಾಳಿ ಮುಂದುವರಿಸಿರುವ ಜಾರಿ ನಿರ್ದೇಶನಾಲಯ(ಇಡಿ)ದ ಅಧಿಕಾರಿಗಳು,...
ಜಪ್ತಿಯಾದ ಹಣ ಹಾಗೂ ಚಿನ್ನ
ಜಪ್ತಿಯಾದ ಹಣ ಹಾಗೂ ಚಿನ್ನ
ಚಂಡಿಗಢ್: ನೋಟ್ ನಿಷೇಧದ ನಂತರ ಅಕ್ರಮವಾಗಿ ಹಣ ಸಂಗ್ರಹಿಸಿಟ್ಟಿರುವವರ ವಿರುದ್ಧ ದಾಳಿ ಮುಂದುವರಿಸಿರುವ ಜಾರಿ ನಿರ್ದೇಶನಾಲಯ(ಇಡಿ)ದ ಅಧಿಕಾರಿಗಳು, ಶನಿವಾರ ಚಂಡಿಗಢದ ಪ್ರತಿಷ್ಠಿತ ಟೈಲರ್ ಮನೆ ಮೇಲೆ ದಾಳಿ ಮಾಡಿ, 30 ಲಕ್ಷ ರುಪಾಯಿ ನಗದು ಹಾಗೂ ಎರಡೂವರೆ ಕೆಜಿ ಚಿನ್ನ ಜಪ್ತಿ ಮಾಡಿದ್ದಾರೆ.
ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಜಪ್ತಿ ಮಾಡಿರುವ 30 ಲಕ್ಷ ರು. ನಗದು ಹಣದಲ್ಲಿ 2000 ರು. ಮುಖಬೆಲೆಯ ಸುಮಾರು 18 ಲಕ್ಷ ರುಪಾಯಿ ಹಾಗೂ ಉಳಿದವು 100, 50 ರುಪಾಯಿ ಮುಖಬೆಲೆ ನೋಟುಗಳಿದ್ದವು ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ವಿವರಿಸಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಚಂಡಿಗಢದ ಸೆಕ್ಟರ್ 22 ಹಾಗೂ ಮೊಹಾಲಿ(ಪಂಜಾಬ್ )ಯ ಮಹಾರಾಜಾ ಟೈಲರ್ ಸ್ಥಳದಲ್ಲಿ ದಾಳಿ ನಡೆಸಿ ನಗದು ಮತ್ತು ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.
ಟೈಲರ್ ಅಂಗಡಿಯ ಮಾಲೀಕ 2.5 ಕೆಜಿ ಚಿನ್ನ ಖರೀದಿಸಿದ್ದು, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com