ಹುತಾತ್ಮ ಯೋಧರು
ದೇಶ
ಪ್ಯಾಂಪೋರ್ ದಾಳಿಯ ಹುತಾತ್ಮ ಯೋಧರಿಗೆ ಭಾರತೀಯ ಸೇನೆ ಶ್ರದ್ಧಾಂಜಲಿ
ಜಮ್ಮು ಮತ್ತು ಕಾಶ್ಮೀರದ ಪ್ಯಾಂಪೋರ್ ನಲ್ಲಿ ಭಯೋತ್ಪಾದಕರು ನಡೆಸಿದ ಉಗ್ರ ದಾಳಿಯಲ್ಲಿ ಹುತಾತ್ಮರಾದ ಮೂವರು ಯೋಧರಿಗೆ ಭಾರತೀಯ ಸೇನೆ ಶ್ರದ್ಧಾಂಜಲಿ...
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪ್ಯಾಂಪೋರ್ ನಲ್ಲಿ ಭಯೋತ್ಪಾದಕರು ನಡೆಸಿದ ಉಗ್ರ ದಾಳಿಯಲ್ಲಿ ಹುತಾತ್ಮರಾದ ಮೂವರು ಯೋಧರಿಗೆ ಭಾರತೀಯ ಸೇನೆ ಶ್ರದ್ಧಾಂಜಲಿ ಅರ್ಪಿಸಿದೆ.
ಸೇನೆಯ ಹಿರಿಯ ಅಧಿಕಾರಿಗಳು, ವಿಭಾಗೀಯ ಆಯುಕ್ತ ಬಸೇರ್ ಅಹಮದ್ ಖಾನ್, ಭದ್ರತಾ ಪಡೆ ಅಧಿಕಾರಿ ಲೆಫ್ಟಿನೆಂಟ್ ಜನರಲ್ ಜೆಎಸ್ ಸಂಧು ಸೇರಿದಂತೆ ಹಲವು ಅಧಿಕಾರಿಗಳು ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.
ಕೇರಳದ ಕಣ್ಣೂರ್ ಜಿಲ್ಲೆಯ ಕೊಟೊಲಿಪರ್ಮ್ ಮೂಲದ 35 ವರ್ಷದ ಜನರಲ್ ರತೇಶ್ ಸಿ. ಮಹಾರಾಷ್ಟ್ರದ 33 ವರ್ಷದ ಸೌರಭ್ ನಂದಕುಮಾರ್, 24 ವರ್ಷದ ಶಶಿಕಾಂತ್ ಪಾಂಡೆ ಅವರು ಕಾವಲು ನಡೆಸುತ್ತಿದ್ದಾಗ ಉಗ್ರರು ಬೈಕ್ ನಲ್ಲಿ ಬಂದು ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದರು.
ಪುಲ್ವಂ ಜಿಲ್ಲೆಯ ಪ್ಯಾಂಪೋರ್ ಕದ್ಲಬಾಲ್ ನಲ್ಲಿ ಸೇನಾ ಕಾವಲುಪಡೆಯ ಮೇಲೆ ಉಗ್ರರು ದಾಳಿ ನಡೆಸಿದ್ದು ಇದರಲ್ಲಿ ಮೂವರು ಭಾರತೀಯ ಯೋಧರು ಹುತಾತ್ಮರಾಗಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ