125 ವರ್ಷಗಳಲ್ಲಿ 500 ಚಂಡಮಾರುತಗಳಿಗೆ ಸಾಕ್ಷಿಯಾದ ಬಂಗಾಳಕೊಲ್ಲಿ

1891 ರಿಂದ ಅಂದರೆ ಸುಮಾರು 125 ವರ್ಷಗಳಿಂದ ಸರಿಸುಮಾರು 500 ಚಂಡಮಾರುತಗಳಿಗೆ ಬಂಗಾಳ ಕೊಲ್ಲಿ ಸಾಕ್ಷೀಭೂತವಾಗಿದೆ. ಅದರಲ್ಲಿ 107 ವಿನಾಶಕಾರಿ ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಭುವನೇಶ್ವರ್: 1891 ರಿಂದ ಅಂದರೆ ಸುಮಾರು 125 ವರ್ಷಗಳಿಂದ ಸರಿಸುಮಾರು 500 ಚಂಡಮಾರುತಗಳಿಗೆ ಬಂಗಾಳ ಕೊಲ್ಲಿ ಸಾಕ್ಷೀಭೂತವಾಗಿದೆ. ಅದರಲ್ಲಿ 107 ವಿನಾಶಕಾರಿ ಚಂಡಮಾರುತಗಳು ಒಡಿಸ್ಸಾವನ್ನು ಅಕ್ಷರಶಃ ನಲುಗಿಸಿವೆ.

ಪಶ್ಚಿಮ ಪೆಸಿಫಿಕ್  ಚಂಡಮಾರುತಗಳಿಗೆ ಹೋಲಿಸಿದರೇ ಬಂಗಾಳ ಕೊಲ್ಲಿಯಲ್ಲಿಯಲ್ಲಿ ಸಂಭವಿಸುವ ಚಂಡಮಾರುತದ ತೀವ್ರತೆ ಕಡಿಮೆಯಾಗಿರುತ್ತದೆ. ಆದರೆ ಸಾವು-ನೋವು ಮತ್ತು ವಿನಾಶದ ಪ್ರಮಾಣ ಅತಿಯಾಗಿರುತ್ತದೆ ಎಂದು ಭುವನೇಶ್ವರದ ಸಾಗರ ಮತ್ತು ಹವಾಮಾನ ವಿಜ್ಞಾನದ ಸ್ಕೂಲ್ ಆಫ್ ಅರ್ತ್ ನ ವಿಸಿಟಿಂಗ್ ಪ್ರೊಫೆಸರ್  ಉಮಾ ಚರಣ್ ಮೊಹಾಂತಿ ಹೇಳಿದ್ದಾರೆ.

ಬಂಗಾಳ ಕೊಲ್ಲಿಯಲ್ಲಿ ಸಂಭವಿಸುವ 24 ಚಂಡಮಾರುತಗಳಲ್ಲಿ ಸುಮಾರು 18 ಸೈಕ್ಲೋನ್ ಗಳು ಸುತ್ತಮುತ್ತಲಿನ ಪ್ರದೇಶಗಳಲ್ಲಿ 5 ಸಾವಿರಕ್ಕೂ ಹೆಚ್ಚು ಮಂದಿಯನ್ನು ಬಲಿತೆಗೆದುಕೊಳ್ಳುತ್ತದೆ ಎಂದು ಅವರು ತಿಳಿಸಿದ್ದಾರೆ.

ನ್ಯಾಷನಲ್ ಸಿಂಪೋಯಿಸಮ್  ಆನ್ ಟ್ರೋಪಿಕಲ್ ಮೀಟರೋಲಜಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  ಚಂಡಮಾರುತ ಬಂದಾಗ ಹೆಚ್ಚಿನ ಪ್ರಮಾಣದ ಸಾವುನೋವುಗಳಾಗುವುದು ಕರಾವಳಿ ತೀರ ಪ್ರದೇಶದಲ್ಲಿ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಒಡಿಸ್ಸಾ ಸರ್ಕಾರ, ಭಾರತೀಯ ಹವಾಮಾನ ಇಲಾಖೆ ಹಾಗೂ ಎಸ್ ಒ ಎ ವಿವಿ ಸಹಯೋಗದಲ್ಲಿ ಈ ಸಮ್ಮೇಳನ ಆಯೋಜಿಸಲಾಗಿತ್ತು. ಇದರಲ್ಲಿ ಹವಾಮಾನ ಬದಲಾವಣೆ ಮತ್ತು ಕರಾವಳಿ ಅಪಾಯ ಸಾಧ್ಯತೆ ಎಂಬ ವಿಷಯದ ಬಗ್ಗೆ ಚರ್ಚೆ ನಡೆಯಿತು. ಪ್ರತಿ ವರ್ಷ ಜಗತ್ತಿನಲ್ಲಿ ಸುಮಾರು 80 ರಿಂದ 90 ಚಂಡಮಾರುತಗಳು ಸಂಭವಿಸುತ್ತವೆ. ಇದರಲ್ಲಿ ಶೇ.ರಷ್ಟು ಬಂಗಾಳ ಕೊಲ್ಲಿ ಮತ್ತು ಅರಬ್ಬೀ ಸಮುದ್ರದ ಮೇಲೆ ಬೀಸುತ್ತವೆ ಎಂದು ವಿವರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com