ಜೆಎನ್ ಯು ಕ್ಯಾಂಪಸ್ ನಲ್ಲಿ 600 ಪೊಲೀಸರಿಂದ ನಜೀಬ್ ಗಾಗಿ ಶೋಧ!

ಅಕ್ಟೋಬರ್ ತಿಂಗಳಿನಿಂದ ನಾಪತ್ತೆಯಾಗಿರುವ ಜೆಎನ್ ಯು ವಿದ್ಯಾರ್ಥಿ ನಜೀಬ್ ಅಹ್ಮದ್ ಗಾಗಿ ದೆಹಲಿ ಪೊಲೀಸರು ಜವಾಹರ್ ಲಾಲ್ ನೆಹರು ವಿಶ್ವವಿದ್ಯಾನಿಲಯದಲ್ಲಿ ಡಿ.19 ರಂದು ಶೋಧಕಾರ್ಯ ನಡೆಸಿದ್ದಾರೆ.
JNU
JNU
ನವದೆಹಲಿ: ಅಕ್ಟೋಬರ್ ತಿಂಗಳಿನಿಂದ ನಾಪತ್ತೆಯಾಗಿರುವ ಜೆಎನ್ ಯು ವಿದ್ಯಾರ್ಥಿ ನಜೀಬ್ ಅಹ್ಮದ್ ಗಾಗಿ ದೆಹಲಿ ಪೊಲೀಸರು ಜವಾಹರ್ ಲಾಲ್ ನೆಹರು ವಿಶ್ವವಿದ್ಯಾನಿಲಯದಲ್ಲಿ ಡಿ.19 ರಂದು ಶೋಧಕಾರ್ಯ ನಡೆಸಿದ್ದಾರೆ. 
ನಾಪತ್ತೆಯಾಗಿರುವ ನಜೀಬ್ ನ ಬಗ್ಗೆ ಸುಳಿವು ಪಡೆಯುವುದಕ್ಕಾಗಿ ಜೆಎನ್ ಯು ಕ್ಯಾಂಪಸ್ ನಲ್ಲಿ ಶೋಧಕಾರ್ಯಾಚರಣೆ ನಡೆಸಿರುವ 600 ಪೊಲೀಸರು, ಹಾಸ್ಟೆಲ್ ನಲ್ಲಿರುವ ಆತನ ಕೊಠಡಿ, ತರಗತಿ ಸೇರಿದಂತೆ ವಿವಿಯ ಎಲ್ಲಾ ಪ್ರದೇಶಗಳಲ್ಲೂ ತಪಾಸಣೆ ನಡೆಸಿದ್ದಾರೆ. " ನಜೀಬ್ ಅಹ್ಮದ್ ನ ಬಗ್ಗೆ ಹೆಚ್ಚಿನ ಮಾಹಿತಿ ಕಲೆಹಾಕುವುದಕ್ಕೆ ಈ ಶೋಧಕಾರ್ಯಾಚರಣೆ ನಡೆಸಲಾಗಿದೆ ಎಂದು ದೆಹಲಿಯ ಅಪರಾಧ ವಿಭಾಗದ ಜಂಟಿ ಆಯುಕ್ತ ರವೀಂದ್ರ ಯಾದವ್ ಹೇಳಿದ್ದಾರೆ. 
ಎಬಿವಿಪಿ ಕಾರ್ಯಕರ್ತರೊಂದಿಗೆ ಮಾರಾಮಾರಿ ನಡೆದ ಪ್ರಕರಣವಾದಾಗಿನಿಂದ ಜೆಎನ್ ಯು ವಿವಿ ವಿದ್ಯಾರ್ಥಿ ನಜೀಬ್ ನಾಪತ್ತೆಯಾಗಿದ್ದಾರೆ. ನಜೀಬ್ ನಾಪತ್ತೆ ಪ್ರಕರಣದಲ್ಲಿ ಶಾಮೀಲಾಗಿರುವ ಆರೋಪವನ್ನು ಎಬಿವಿಪಿ ನಿರಾಕರಿಸಿದೆ. ನಾಪತ್ತೆಯಾಗಿ 2 ತಿಂಗಳಾದರೂ ನಜೀಬ್ ಅಹ್ಮದ್ ಪತ್ತೆಯಾಗದೇ ಇರುವ ಹಿನ್ನೆಲೆಯಲ್ಲಿ ಆತನ ಬಗ್ಗೆ ಸುಳಿವು ನೀಡಿದವರಿಗೆ 5 ಲಕ್ಷದಿಂದ 10 ಲಕ್ಷದ ವರೆಗೆ ಪೊಲೀಸರು ಬಹುಮಾನ ಘೋಷಿಸಿದ್ದಾರೆ. 
ನಜೀಬ್ ಅಹ್ಮದ್ ನಪತ್ತೆ ಪ್ರಕರಣದ ಬಗ್ಗೆ ವಿಚಾರಣೆ ನಡಿಸಿದ್ದ ದೆಹಲಿ ಹೈಕೋರ್ಟ್ ಜೆಎನ್ ಯು ಕ್ಯಾಂಪಸ್ ನ್ನು ತಪಾಸಣೆ ನಡೆಸುವಂತೆ ದೆಹಲಿ ಪೊಲೀಸರಿಗೆ ನಿರ್ದೇಶನ ನೀಡಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com