ಮೊದಲ ಬಾರಿಗೆ ಗಣರಾಜ್ಯೋತ್ಸವದಲ್ಲಿ ಎನ್ಎಸ್ ಜಿ ಕಮಾಂಡೋಗಳ ಪಥಸಂಚಲನ ಸಾಧ್ಯತೆ

ಗಣರಾಜ್ಯೋತ್ಸವದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಬ್ಲ್ಯಾಕ್ ಕ್ಯಾಟ್ ಎನ್ಎಸ್ ಜಿ ಕಮಾಂಡೋಗಳು ರಾಜ್ ಪಥ್ ನಲ್ಲಿ ನಡೆಯಲಿರುವ ಪಥಸಂಚಲನದಲ್ಲಿ ಭಾಗವಹಿಸುವ ಸಾಧ್ಯತೆಗಳಿವೆ.
ಎನ್ಎಸ್ ಜಿ ಕಮಾಂಡೋ
ಎನ್ಎಸ್ ಜಿ ಕಮಾಂಡೋ
ನವದೆಹಲಿ: ಗಣರಾಜ್ಯೋತ್ಸವದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಬ್ಲ್ಯಾಕ್ ಕ್ಯಾಟ್ ಎನ್ಎಸ್ ಜಿ ಕಮಾಂಡೋಗಳು ರಾಜ್ ಪಥ್ ನಲ್ಲಿ ನಡೆಯಲಿರುವ ಪಥಸಂಚಲನದಲ್ಲಿ ಭಾಗವಹಿಸುವ ಸಾಧ್ಯತೆಗಳಿವೆ. 
ಗೃಹ ಖಾತೆ, ರಕ್ಷಣಾ ಖಾತೆ ಸಚಿವರು ಈ ಬಗ್ಗೆ ಸಭೆ ನಡೆಸಿ ನಿರ್ಧಾರ ಕೈಗೊಂಡಿದ್ದು, ರಾಷ್ಟ್ರೀಯ ಭದ್ರತಾ ಪಡೆ (ಎನ್ಎಸ್ ಜಿ) ಕೇಂದ್ರ ಕಚೇರಿಯಲ್ಲಿ ಪಥಸಂಚಲನಕ್ಕಾಗಿ 60 ಕಮಾಂಡೋಗಳ ಆಯ್ಕೆ ಪ್ರಕ್ರಿಯೆ ಈಗಾಗಲೇ ಪ್ರಾರಂಭವಾಗಿದೆ ಎಂದು ತಿಳಿದುಬಂದಿದೆ. 
ಭಾರತೀಯ ಗಣರಾಜ್ಯೋತ್ಸವ ಆಚರಣೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಎನ್ಎಸ್ ಜಿ ಕಮಾಂಡೋಗಳು ಪಥಸಂಚಲನದಲ್ಲಿ ಭಾಗವಹಿಸಲಿದ್ದಾರೆ ಎಂಬ ನಿರೀಕ್ಷೆ ಇದೆ. ಈ ವರೆಗೂ ಸೇನೆಯ ವಿಶೇಷ ಪಡೆಗಳು ಮಾತ್ರ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಭಾಗವಹಿಸುತ್ತಿದ್ದ ಕಮಾಂಡೋ ಪಡೆಗಳಾಗಿದ್ದವು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com