ದಿಲ್ ಸುಖ್ ನಗರ ಸ್ಫೋಟ ಪ್ರಕರಣ: ಯಾಸೀನ್ ಭಟ್ಕಳ್ ಸೇರಿ ಐವರಿಗೆ ಗಲ್ಲು ಶಿಕ್ಷೆ

2013 ರ ಫೆಬ್ರವರಿ 21 ರಂದು ದಿಲ್ ಸುಖ್ ನಗರದಲ್ಲಿ ಸಂಭವಿಸಿದ್ದ ಅವಳಿ ಬಾಂಬ್ ಸ್ಫೋಟ ಪ್ರಕರಣದ 5 ಅಪರಾಧಿಗಳಿಗೆ ಹೈದರಾಬಾದ್ ನ ಎನ್ಐಎ ವಿಶೇಷ ನ್ಯಾಯಾಲಯ ಗಲ್ಲು ಶಿಕ್ಷೆ ಪ್ರಕಟಿಸಿದೆ.
ದಿಲ್ ಸುಖ್ ನಗರದಲ್ಲಿ ಬಾಂಬ್ ಸ್ಫೋಟ ಸಂಭವಿಸಿದ ಪ್ರದೇಶ (ಸಂಗ್ರಹ ಚಿತ್ರ)
ದಿಲ್ ಸುಖ್ ನಗರದಲ್ಲಿ ಬಾಂಬ್ ಸ್ಫೋಟ ಸಂಭವಿಸಿದ ಪ್ರದೇಶ (ಸಂಗ್ರಹ ಚಿತ್ರ)
ಹೈದರಾಬಾದ್: 2013 ರ ಫೆಬ್ರವರಿ 21 ರಂದು ದಿಲ್ ಸುಖ್ ನಗರದಲ್ಲಿ ಸಂಭವಿಸಿದ್ದ ಅವಳಿ ಬಾಂಬ್ ಸ್ಫೋಟ ಪ್ರಕರಣದ 5 ಅಪರಾಧಿಗಳಿಗೆ ಹೈದರಾಬಾದ್ ನ ಎನ್ಐಎ ವಿಶೇಷ ನ್ಯಾಯಾಲಯ ಗಲ್ಲು ಶಿಕ್ಷೆ ಪ್ರಕಟಿಸಿದೆ. 
ಡಿ.13 ರಂದು ಪ್ರಕರಣದ ಆರೋಪಿಗಳನ್ನು ಅಪರಾಧಿಗಳೆಂದು ತೀರ್ಪು ಪ್ರಕಟಿಸಿದ್ದ ಎನ್ಐಎ ಕೋರ್ಟ್, ಉಗ್ರ ಯಾಸೀಸ್ ಭಟ್ಕಳ್ ಸೇರಿದಂತೆ 5 ಆರೋಪಿಗಳ ಶಿಕ್ಷೆ ಪ್ರಮಾಣವನ್ನು ಡಿ.19 ಕ್ಕೆ ಕಾಯ್ದಿರಿಸಿತ್ತು. ಶಿಕ್ಷೆ ಪ್ರಮಾಣವನ್ನು ಪ್ರಕಟಿಸಿರುವ ಎನ್ಐಎ ವಿಶೇಷ ನ್ಯಾಯಾಲಯ ಎಲ್ಲಾ 6 ಅಪರಾಧಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸಿದೆ. 
ಅಸಾದುಲ್ಲಾ ಅಖ್ತರ್, ಯಾಸಿನ್ ಭಟ್ಕಳ್, ನಬೀಲ್ ಅಹ್ಮದ್, ತಾಹ್ ಸೇನ್ ಅಖ್ತರ್(ಮೋನು) ಅಜೀಜ್ ಸಯೀದ್, ಆಜಾಜ್ ಶೇಖ್ ಅಪರಾಧಿಗಳೆಂದು ಎನ್ಐಎ ವಿಶೇಷ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿದೆ.  ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು 2014 ರ ಸೆ.5 ರಂದು ಬಂಧಿಸಲಾಗಿತ್ತು. 2013 ರ ಫೆಬ್ರವರಿ ತಿಂಗಳಲ್ಲಿ ನಡೆದಿದ್ದ ಅವಳಿ ಬಾಂಬ್ ಸ್ಫೋಟ ಪ್ರಕರಣದಲ್ಲಿ 19 ಜನರು ಮೃತಪಟ್ಟಿದ್ದರು. ಬಂಧಿತ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 302, 307, 324, 326, 124 A, 153 ಎ, 120 ಬಿ ಸ್ಫೋಟಕಗಳ ವಸ್ತುಗಳ ಕಾಯ್ದೆಯ ಸೆಕ್ಷನ್ 16, 18 ಹಾಗೂ 20 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಎಲ್ಲಾ 6 ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಎನ್ಐಎ ನ್ಯಾಯಾಲಯಕ್ಕೆ ಮನವಿ ಮಾಡಿತ್ತು.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com