ಆದಾಯ ತೆರಿಗೆ ಇಲಾಖೆಯಿಂದ 3,185 ಕೋಟಿ ಕಪ್ಪು ಹಣ, 86 ಕೋಟಿ ಹೊಸ ನೋಟ್ ಜಪ್ತಿ

ಕೇಂದ್ರ ಸರ್ಕಾರ 500 ಹಾಗೂ 1000 ರುಪಾಯಿ ಮುಖಬೆಲೆಯ ನೋಟುಗಳನ್ನು ರದ್ದು ಮಾಡಿದ ನಂತರ ಆದಾಯ ತೆರಿಗೆ ಇಲಾಖೆ...
ಮಹಾರಾಷ್ಟ್ರದ ಸತಾರದಲ್ಲಿ ಮಂಗಳವಾರ ಜಪ್ತಿಯಾದ ಹಣ
ಮಹಾರಾಷ್ಟ್ರದ ಸತಾರದಲ್ಲಿ ಮಂಗಳವಾರ ಜಪ್ತಿಯಾದ ಹಣ
ನವದೆಹಲಿ: ಕೇಂದ್ರ ಸರ್ಕಾರ 500 ಹಾಗೂ 1000 ರುಪಾಯಿ ಮುಖಬೆಲೆಯ ನೋಟುಗಳನ್ನು ರದ್ದು ಮಾಡಿದ ನಂತರ ಆದಾಯ ತೆರಿಗೆ ಇಲಾಖೆ ದೇಶಾದ್ಯಂತ ಕಪ್ಪು ಕುಳಗಳ ಮೇಲೆ ದಾಳಿ ನಡೆಸಿ ಇದುವರೆ ಒಟ್ಟು 3,185 ಕೋಟಿ ರುಪಾಯಿ ಕಪ್ಪು ಹಣ ಹಾಗೂ 86 ಕೋಟಿ ಮೌಲ್ಯದ ಹೊಸ ಎರಡು ಸಾವಿರ ರುಪಾಯಿ ನೋಟ್ ಗಳನ್ನು ಜಪ್ತಿ ಮಾಡಿದೆ.
ನವೆಂಬರ್ 8ರಂದು ಗರಿಷ್ಠ ಮುಖಬೆಲೆಯ ನೋಟುಗಳನ್ನು ರದ್ದು ಮಾಡಿದ ನಂತರ ಆದಾಯ ತೆರಿಗೆ ಅಧಿಕಾರಿಗಳು ಇದುವರೆಗೆ ಒಟ್ಟು 677 ಕಡೆ ದಾಳಿ ನಡೆಸಿದ್ದು, ಅವರ ವಿರುದ್ಧ ಆದಾಯ ತೆರಿಗೆ ಕಾಯ್ದೆಯಡಿ ತನಿಖೆ ನಡೆಯುತ್ತಿದೆ. ಅಲ್ಲದೆ ಹವಾಲ ಡೀಲಿಂಗ್ ನಲ್ಲಿ ಭಾಗಿಯಾದ ಮತ್ತು ತೆರಿಗೆ ವಂಚಿಸಿದ ಆರೋಪದ ಮೇಲೆ ಸುಮಾರು 3,100 ಮಂದಿಗೆ ಆದಾಯ ತೆರಿಗೆ ಇಲಾಖೆ ನೋಟಿಸ್ ಜಾರಿ ಮಾಡಿದೆ.
ದಾಳಿಯ ವೇಳೆ ಸುಮಾರು 428 ಕೋಟಿ ಮೌಲ್ಯದ ಚಿನ್ನಾಭರಣ ಹಾಗೂ ಎರಡು ಸಾವಿರ ರುಪಾಯಿ ಮುಖಬೆಲೆಯ 86 ಕೋಟಿ ರುಪಾಯಿ ಜಪ್ತಿ ಮಾಡಲಾಗಿದೆ ಎಂದು ತೆರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಅಕ್ರಮ ಹಣ ವರ್ಗಾವಣೆ, ಭ್ರಷ್ಟಾಚಾರ ಹಾಗೂ ಅಕ್ರಮ ಆಸ್ತಿ ಸಂಪಾದನೆಯಂತಹ ಸುಮಾರು 220 ಪ್ರಕರಣಗಳನ್ನು ಆದಾಯ ತೆರಿಗೆ ಇಲಾಖೆ ಸಹೋದರ ಸಂಸ್ಥೆಗಳಾದ ಸಿಬಿಐ, ಜಾರಿ ನಿರ್ದೇಶನಾಲಯ ತನಿಖೆಗೆ ಒಪ್ಪಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com