ಮೋದಿ ಬಟ್ಟೆ ಬದಲಾಯಿಸಿದಂತೆ ಆರ್ ಬಿಐ ನಿಯಮ ಬದಲಾಯಿಸುತ್ತಿದೆ: ರಾಹುಲ್ ಗಾಂಧಿ

ನೋಟ್ ನಿಷೇಧದ ನಂತರ ದಿನಕ್ಕೊಂದು ನಿಯಮ ಜಾರಿಗೆ ತರುತ್ತಿರುವ ಆರ್ ಬಿಐ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಉಪಾಧ್ಯಕ್ಷ...
ರಾಹುಲ್ ಗಾಂಧಿ
ರಾಹುಲ್ ಗಾಂಧಿ
ನವದೆಹಲಿ: ನೋಟ್ ನಿಷೇಧದ ನಂತರ ದಿನಕ್ಕೊಂದು ನಿಯಮ ಜಾರಿಗೆ ತರುತ್ತಿರುವ ಆರ್ ಬಿಐ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಬಟ್ಟೆ ಬದಲಾಯಿಸಿದಂತೆ ಕೇಂದ್ರೀಯ ಬ್ಯಾಂಕ್ ತನ್ನ ನಿಯಮಗಳನ್ನು ಬದಲಿಸುತ್ತಿದೆ ಎಂದು ಮಂಗಳವಾರ ಆರೋಪಿಸಿದ್ದಾರೆ.
500 ಹಾಗೂ 1000 ರುಪಾಯಿ ಮಖಬೆಲೆಯ ನೋಟ್ ಗಳನ್ನು ಬ್ಯಾಂಕ್ ಗೆ ಜಮೆ ಮಾಡುವುದಕ್ಕೆ ನಿರ್ಬಂಧ ಹೇರಿದ್ದ ಕೇಂದ್ರ ಸರ್ಕಾರ, 5000 ರುಪಾಯಿಗೂ ಹೆಚ್ಚಿನ ಮೊತ್ತದ ಹಳೆ ನೋಟ್ ಗಳನ್ನು ಒಂದೇ ಬಾರಿಗೆ ಠೇವಣಿ ಇಡಲು ಈ ತಿಂಗಳ ಅಂತ್ಯದವರೆಗೆ ಅವಕಾಶ ನೀಡಿದೆ.
ಈ ಬಗ್ಗೆ ಟ್ವೀಟರ್ ಮೂಲಕ ಪ್ರತಿಕ್ರಿಯಿಸಿರುವ ರಾಹುಲ್ ಗಾಂಧಿ, ನೋಟ್ ನಿಷೇಧದ ನಂತರ ಆರ್ ಬಿಐ ಮೋದಿ ಅವರು ಬಟ್ಟೆ ಬದಲಾವಣೆ ಮಾಡಿದ ರೀತಿ ನಿಯಮಗಳನ್ನು ಬದಲಾವಣೆ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ರಾಹುಲ್ ಗಾಂಧಿ ಅವರು ನಾಳೆ ಗುಜರಾತ್ ನ ಮೆಹ್ಸಾನ್ ನಲ್ಲಿ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದು, ನೋಟ್ ನಿಷೇಧದ ವಿರುದ್ಧದ ತಮ್ಮ ಹೋರಾಟವನ್ನು ಪ್ರಧಾನಿಯ ತವರು ರಾಜ್ಯಕ್ಕೂ ವಿಸ್ತರಿಸಲು ಸಿದ್ಧತೆ ನಡೆಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com