ಸಿಬಿಎಸ್ ಇ ಶಾಲೆಗಳಲ್ಲಿ ಸ್ಥಳೀಯ ಭಾಷೆ ಕಲಿಕೆಗೆ ಮಂಡಳಿ ಸಮ್ಮತಿ, 10ನೇ ತರಗತಿಗೆ ಬೋರ್ಡ್ ಪರೀಕ್ಷೆ ಕಡ್ಡಾಯ

ಸಿಬಿಎಸ್ ಇ ಶಾಲೆಗಳ ಪಠ್ಯಕ್ರಮದಲ್ಲಿ ಇನ್ನು ಮುಂದೆ ಸ್ಥಳೀಯ ಭಾಷೆಗಳನ್ನು ಕಲಿಸಬೇಕೆಂಬ ಬೇಡಿಕೆಗೆ ಸಿಬಿಎಸ್ ಇ ಸಮ್ಮತಿ ಸೂಚಿಸಿದೆ. ತ್ರಿಭಾಷಾ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಸಿಬಿಎಸ್ ಇ ಶಾಲೆಗಳ ಪಠ್ಯಕ್ರಮದಲ್ಲಿ ಇನ್ನು ಮುಂದೆ ಸ್ಥಳೀಯ ಭಾಷೆಗಳನ್ನು ಕಲಿಸಬೇಕೆಂಬ ಬೇಡಿಕೆಗೆ ಸಿಬಿಎಸ್ ಇ ಸಮ್ಮತಿ ಸೂಚಿಸಿದೆ. ತ್ರಿಭಾಷಾ ಸೂತ್ರದ ಅನ್ವಯ ಸಂವಿಧಾನದ 8ನೇ ಪರಿಚ್ಛೇದದಲ್ಲಿ ಬರುವ ಭಾಷೆಗಳನ್ನು ಪ್ರಮುಖವಾಗಿ ಕಲಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲು ಆಡಳಿತ ಮಂಡಳಿ ನಿರ್ಧರಿಸಿದೆ. 
ಒಂದು ವೇಳೆ ಮಂಡಳಿ. ಶಿಫಾರಸ್ಸುಗಳನ್ನು ಕೇಂದ್ರ ಸರ್ಕಾರ ಒಪ್ಪಿಕೊಂಡಿದ್ದೇ ಆದಲ್ಲಿ ಕರ್ನಾಟಕ ಸೇರಿದಂತೆ ಇತರೆ ರಾಜ್ಯಗಳ ಸಿಬಿಎಸ್ ಇ ಶಾಲೆಗಳಲ್ಲಿ ಹಿಂದಿ, ಆಂಗ್ಲ ಭಾಷೆ ಜೊತೆಗೆ ಸ್ಥಳೀಯ ಭಾಷೆ ಕಲಿಕೆಗೂ ಅವಕಾಶವಿದೆ.
2018ರಿಂದ 10ನೇ ತರಗತಿಗೆ ಬೋರ್ಡ್ ಪರೀಕ್ಷೆ ಕಡ್ಡಾಯ: ಸಿಬಿಎಸ್ ಇ 10ನೇ ತರಗತಿ ವಿದ್ಯಾರ್ಥಿಗಳು 2018ರಿಂದ ಬೋರ್ಡ್ ಪರೀಕ್ಷೆ ಬರೆಯುವುದನ್ನು ಕಡ್ಡಾಯ ಮಾಡಲಾಗಿದೆ. ಇದಕ್ಕೆ ಕೇಂದ್ರ ಸರ್ಕಾರ ಅಂಕಿತ ಹಾಕಲಷ್ಟೇ ಇನ್ನು ಬಾಕಿ ಉಳಿದಿರುವುದು. ಸದ್ಯ ಸಿಬಿಎಸ್ ಇ 10ನೇ ತರಗತಿ ವಿದ್ಯಾರ್ಥಿಗಳಿಗೆ ಎರಡು ಆಯ್ಕೆಗಳಿದ್ದು, ಬೋರ್ಡ್ ಪರೀಕ್ಷೆ ಅಥವಾ ಶಾಲಾ ಪರೀಕ್ಷೆಗಳನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com