'ಚಿಕ್ಕಿ ಹಗರಣ': ಮಹಾರಾಷ್ಟ್ರ ಸಚಿವೆ ಪಂಕಜಾ ಮುಂಡೆಗೆ ಕ್ಲೀನ್ ಚಿಟ್

ಚಿಕ್ಕಿ ಹಗರಣ ಪ್ರಕರಣದಲ್ಲಿ ಮಹಾರಾಷ್ಟ್ರ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ...
ಮಹಾರಾಷ್ಟ್ರ ಸಚಿವೆ ಪಂಕಜಾ ಮುಂಡೆ
ಮಹಾರಾಷ್ಟ್ರ ಸಚಿವೆ ಪಂಕಜಾ ಮುಂಡೆ
ಮುಂಬೈ: ಚಿಕ್ಕಿ ಹಗರಣ ಪ್ರಕರಣದಲ್ಲಿ ಮಹಾರಾಷ್ಟ್ರ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ಪಂಕಜಾ ಮುಂಡೆಗೆ ಭ್ರಷ್ಟಾಚಾರ ವಿರೋಧಿ ದಳ ಆರೋಪ ಮುಕ್ತಗೊಳಿಸಿದೆ.
ಶಾಲಾ ಮಕ್ಕಳಿಗೆ ನೀಡಲಾಗುವ ವಸ್ತುಗಳ 206 ಕೋಟಿ ರೂಪಾಯಿಗಳ ಗುತ್ತಿಗೆಯಲ್ಲಿ ಅಕ್ರಮ ಎಸಗಿದ ಆರೋಪವನ್ನು ಮುಂಡೆ ಎದುರಿಸುತ್ತಿದ್ದರು.ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಕೇಸನ್ನು ಕೊನೆಗೊಳಿಸಿದೆ. ಸಚಿವೆ ವಿರುದ್ಧ ಮಾಡಿರುವ ಆರೋಪಕ್ಕೆ ಯಾವುದೇ ಬಲವಾದ ಸಾಕ್ಷ್ಯಾಧಾರಗಳು ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎಸಿಬಿಯ ಹೆಚ್ಚುವರಿ ಪೊಲೀಸ್ ಕಾನ್ಸ್ಟೇಬಲ್ ಕೇಶವ್ ಪಾಟೀಲ್ ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್ ಸಮಿತಿ ವಕ್ತಾರ ಸಚಿನ್ ಸಾವಂತ್ ಅವರಿಗೆ ಬರೆದ ಪತ್ರದಲ್ಲಿ, ಮುಂಡೆಯವರ ವಿರುದ್ಧ ಮಾಡಿರುವ ಆರೋಪದಲ್ಲಿ ಯಾವುದೇ ಸತ್ಯಾಂಶ ಕಂಡುಬರುತ್ತಿಲ್ಲ ಎಂದು ಹೇಳಿದ್ದಾರೆ.
ಶಾಲಾ ಮಕ್ಕಳಿಗೆ ವಿತರಿಸುವ ಚಿಕ್ಕಿ ಸಿಹಿತಿಂಡಿ, ಮ್ಯಾಟ್, ನೋಟು ಪುಸ್ತಕಗಳು, ವಾಟರ್ ಫಿಲ್ಟರ್ ಮೊದಲಾದ ವಸ್ತುಗಳ ಪೂರೈಕೆಗೆ ನೀಡಿದ ಗುತ್ತಿಗೆಯಲ್ಲಿ ನಿಯಮಗಳನ್ನು ಗಾಳಿಗೆ ತೂರಿ ಸಾವಿರಾರು ಕೋಟಿ ರೂಪಾಯಿ ಅಕ್ರಮ ಎಸಗಿದ್ದಾರೆ ಎಂದು ಸಚಿನ್ ಸಾವಂತ್ ಕಳೆದ ವರ್ಷ ಸಚಿವೆ ಪಂಕಜಾ ಮುಂಡೆ ವಿರುದ್ಧ ದೂರು ನೀಡಿದ್ದರು.
ಇದಕ್ಕೆ ಪಂಕಜಾ ಮುಂಡೆ ಆರೋಪವನ್ನು ಅಲ್ಲಗಳೆದು ಯಾವುದೇ ರೀತಿಯ ತನಿಖೆಗೆ ಸಿದ್ದವೆಂದು ಹೇಳಿದ್ದರು. ತಮ್ಮ ವಿರುದ್ಧ ರಾಜಕೀಯ ದುರುದ್ದೇಶದಿಂದ ಆರೋಪ ಮಾಡುತ್ತಿದ್ದಾರೆ ಎಂದು ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com