ಲಡ್ಡುಗೆ ನೀಡುವ ಸಬ್ಸಿಡಿ ವಾಪಸ್ ಪಡೆಯಲು ಟಿಟಿಡಿ ನಿರ್ಧಾರ: ದುಬಾರಿಯಾಗಲಿದೆ ತಿರುಪತಿ ಲಡ್ಡು

ಶೀಘ್ರವೇ ತಿರುಪತಿ ಲಡ್ಡುವಿನ ಬೆಲೆ ಏರಿಕೆಯಾಗುವ ಸಾಧ್ಯತೆಯಿದೆ ಎಂದು ತಿರುಪತಿ ತಿರುಮಲ ದೇವಾಸ್ಥಾನ ಟ್ರಸ್ಟ್ ನ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ತಿರುಪತಿ: ಶೀಘ್ರವೇ ತಿರುಪತಿ ಲಡ್ಡುವಿನ ಬೆಲೆ ಏರಿಕೆಯಾಗುವ ಸಾಧ್ಯತೆಯಿದೆ ಎಂದು ತಿರುಪತಿ ತಿರುಮಲ ದೇವಾಸ್ಥಾನ ಟ್ರಸ್ಟ್ ನ ಮೂಲಗಳು ತಿಳಿಸಿವೆ.

ಲಡ್ಡು ತಯಾರಿಸಲು ಬೇಕಾಗುವ ಸಾಮಾಗ್ರಿಗಳ ಬೆಲೆಯಲ್ಲಿ ಏರಿಕೆಯಾಗಿರುವುದರಿಂದ ಲಾಡುವಿಗೆ ನೀಡಿದ್ದ ಸಬ್ಸಿಡಿಯನ್ನು ಹಿಂತೆಗೆದುಕೊಳ್ಳಲು ಟಿಟಿಡಿ ನಿರ್ಧರಿಸಿದೆ.

ತಿರುಪತಿಯಲ್ಲಿ ಮಾರಾಟ ಮಾಡುವ ಒಂದು ಲಾಡು ತಯಾರಿಕೆಗೆ 34.70 ಪೈಸೆ ವೆಚ್ಚ ತಗಲುತ್ತದೆ. ಟಿಟಿಡಿ ಲಾಡುಗೆ ನೀಡುವ ಸಬ್ಸಿಡಿ ವಾಪಸ್ ಪಡೆದರೇ ಪ್ರತಿಯೊಂದು ಲಾಡುವಿನ ಬೆಲೆ 40 ರು. ಆಗುತ್ತದೆ.

ಲಡ್ಡು ತಯಾರಿಕೆಗೆ ಬಳಸುವ ತುಪ್ಪದ ಬೆಲೆ 2007 ರಿಂದ ಗಣನೀಯ ಪ್ರಮಾಣದಲ್ಲಿ ಏರುತ್ತಿದೆ. ಹೀಗಾಗಿ 10 ರುಪಾಯಿಗೆ ಮಾರಾಟವಾಗುತ್ತಿದ್ದ ಲಡ್ಡುವಿನ ಬೆಲೆಯನ್ನು 25 ರು ಗೆ ಏರಿಸಲಾಗಿದೆ.

ಈ ಹಿಂದೆ ನಡೆದ ಬೋರ್ಡ್ ಮೀಟಿಂಗ್ ನಲ್ಲಿ ಈ ಬಗ್ಗೆ ಚರ್ಚಿಸಲಾಗಿದೆ, ಆದರೆ ಇದುವರೆಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಭವಿಷ್ಯದಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಟಿಟಿಡಿ ಅಧ್ಯಕ್ಷ ಚಡಲಾವಾಡ ಕೃಷ್ಣ ಮೂರ್ತಿ ತಿಳಿಸಿದ್ದಾರೆ.

ಪ್ರತಿದಿನ ಮೂರು ಲಕ್ಷ ಲಡ್ಡು ತಿರುಪತಿಯಲ್ಲಿ ತಯಾರಾಗುತ್ತದೆ. ದಿನ ನಿತ್ಯ ಕನಿಷ್ಠ ಪಕ್ಷ 1 ಲಕ್ಷ ಭಕ್ತಾದಿಗಳು ಪ್ರಸಾದ ಪಡೆಯುತ್ತಾರೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com