ರಾಜಿನಾಮೆ ಹಿಂದೆ ಯಾವುದೇ ಒತ್ತಡ, ರಾಜಕೀಯ ಇಲ್ಲ: ಪ್ರಧಾನಿ ಭೇಟಿ ಬಳಿಕ ನಜೀಬ್ ಜಂಗ್

ಅಚ್ಚರಿ ಬೆಳವಣಿಗೆ ಎಂಬಂತೆ ನಿನ್ನೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ಸ್ಥಾನಕ್ಕೆ ದಿಡೀರ್ ರಾಜಿನಾಮೆ ನೀಡಿದ್ದ ನಜೀಬ್ ಜಂಗ್ ಅವರು ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ...
ನಜೀಬ್ ಜಂಗ್
ನಜೀಬ್ ಜಂಗ್
ನವದೆಹಲಿ: ಅಚ್ಚರಿ ಬೆಳವಣಿಗೆ ಎಂಬಂತೆ ನಿನ್ನೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ಸ್ಥಾನಕ್ಕೆ ದಿಡೀರ್ ರಾಜಿನಾಮೆ ನೀಡಿದ್ದ ನಜೀಬ್ ಜಂಗ್ ಅವರು ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.
ಪ್ರಧಾನಿ ಭೇಟಿ ಬಳಿಕ ಖಾಸಗಿ ವಾಹಿನಿಯೊಂದಕ್ಕೆ ಮಾತನಾಡಿದ ಜಂಗ್, ತಮ್ಮ ರಾಜಿನಾಮೆ ಹಿಂದೆ ಕೇಂದ್ರ ಸರ್ಕಾರದ ಒತ್ತಡ ಅಥವಾ ರಾಜಕೀಯ ಉದ್ದೇಶ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ನಾನು ನನ್ನ ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯಬೇಕಾಗಿದೆ ಮತ್ತು ಪುಸ್ತಕ ಬರೆಯುವುದರ ಕಡೆ ಗಮನ ನೀಡಬೇಕಾಗಿರುವುದರಿಂದ ಲೆಫ್ಟಿನೆಂಟ್ ಗವರ್ನರ್ ಸ್ಥಾನಕ್ಕೆ ರಾಜಿನಾಮೆ ನೀಡಿದ್ದೇನೆ ಎಂದು ನಜೀಬ್ ಜಂಗ್ ಅವರು ಹೇಳಿದ್ದಾರೆ.
ನನಗೆ 95 ವರ್ಷದ ತಾಯಿ ಇದ್ದು, ಅವರಿಗೆ ಹೆಚ್ಚು ಸಮಯ ಕೊಡಬೇಕಾಗಿದೆ. ಅಲ್ಲದೆ ಮಕ್ಕಳು ಮತ್ತು ಮೊಮ್ಮಕ್ಕಳೊಂದಿಗೆ ಕಾಲಕಳೆಯು ಅಗತ್ಯ ಇದೆ. ಆದರೆ ಈ ಹುದ್ದೆಯಲ್ಲಿ ನಾನು ರಜೆ ಪಡೆಯಲು ಸಾಧ್ಯವಿಲ್ಲ ಎಂದು ಜಂಗ್ ತಿಳಿಸಿದ್ದಾರೆ.
ವರದಿಗಳ ಪ್ರಕಾರ, ಪ್ರಧಾನಿ ಮೋದಿ ಅವರು ಲೆಫ್ಟಿನೆಂಟ್ ಗವರ್ನರ್ ಹುದ್ದೆಯಲ್ಲಿ ಮುಂದುವರೆಯುವಂತೆ ನಜೀಬ್ ಜಂಗ್ ಅವರಿಗೆ ಸೂಚಿಸಿದ್ದಾರೆ. ಆದರೆ ಜಂಗ್ ಅವರನ್ನು ಅದನ್ನು ನಯವಾಗಿಯೇ ತಿರಸ್ಕರಿಸಿದ್ದಾರೆ ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com