ಕಪ್ಪು ಸಮುದ್ರದಲ್ಲಿ ರಷ್ಯಾ ಸೇನಾ ವಿಮಾನ ಪತನ; 92 ಮಂದಿ ಸಾವು

ಸೋಚಿಯಿಂದ ಟೇಕ್ ಆಫ್ ಆಗಿ ನಾಪತ್ತೆಯಾಗಿದ್ದ ರಷ್ಯಾದ ಮಿಲಿಟರಿ ವಿಮಾನ ಕಪ್ಪು ಸಮುದ್ರದಲ್ಲಿ ಪತನವಾಗಿದೆ.
ರಷ್ಯಾ ಸೇನಾ ವಿಮಾನ ಪತನ?
ರಷ್ಯಾ ಸೇನಾ ವಿಮಾನ ಪತನ?
Updated on
ಮಾಸ್ಕೋ: ಸೋಚಿಯಿಂದ ಟೇಕ್ ಆಫ್ ಆಗಿ ನಾಪತ್ತೆಯಾಗಿದ್ದ ರಷ್ಯಾದ ಮಿಲಿಟರಿ ವಿಮಾನ ಕಪ್ಪು ಸಮುದ್ರದಲ್ಲಿ ಪತನವಾಗಿದೆ. 
ಡಿ.25 ರಂದು ಬೆಳಿಗ್ಗೆ  ಸಿರಿಯಾದತ್ತ ಹೊರಟಿದ್ದ ಸೇನಾ ವಿಮಾನ ಟೇಕ್ ಆಫ್ ಆದ ಕೆಲವೇ ಸಮಯದಲ್ಲಿ ರಡಾರ್ ನೊಂದಿಗಿನ ಸಂಪರ್ಕವನ್ನು ಕಳೆದುಕೊಂಡಿತ್ತು. ಇತ್ತೀಚಿನ ವರದಿ ಪ್ರಕಾರ ರಷ್ಯಾದ ಸೇನಾ ವಿಮಾನ ಟಿಯು-154 ಕಪ್ಪು ಸಮುದ್ರದಲ್ಲಿ ಪತನವಾಗಿದ್ದು, ವಿಮಾನದಲ್ಲಿದ್ದ 82 ಪ್ರಯಾಣಿಕರು 10 ಸೇನಾ ಸಿಬ್ಬಂದಿಗಳು ಮೃತಪಟ್ಟಿದ್ದಾರೆ ಎಂದು ರಷ್ಯಾದ ಸುದ್ದಿ ಸಂಸ್ಥೆ ಟಿಎಎಸ್ಎಸ್ ವರದಿ ಪ್ರಕಟಿಸಿದೆ. 
ವಿಮಾನ ಪತನಗೊಂಡಿರುವ ಪ್ರದೇಶವನ್ನೂ ಪತ್ತೆ ಮಾಡಲಾಗಿದೆ ಎಂದು ಟಿಎಎಸ್ಎಸ್ ವರದಿ ಮಾಡಿದೆ.  ಘಟನೆ ಬಗ್ಗೆ ರಷ್ಯಾ ವ್ಲಾದಿಮಿರ್ ಪುಟಿನ್ ವರದಿ ಪಡೆದಿದ್ದು, 82 ಪ್ರಯಾಣಿಕರ ಪೈಕಿ ಪತ್ರಕರ್ತರು ಹಾಗೂ ಕಲಾವಿದರೂ ಇದ್ದರೆಂದು ತಿಳಿದುಬಂದಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com