2017ರಲ್ಲಿ ಮತ್ತೆ 200 ರೈಲ್ವೆ ನಿಲ್ದಾಣಗಳಲ್ಲಿ ವೈ-ಫೈ ಸೌಲಭ್ಯ: ಸುರೇಶ್ ಪ್ರಭು

2017ರಲ್ಲಿ ಮತ್ತೆ 200 ರೈಲ್ವೆ ನಿಲ್ದಾಣಗಳಲ್ಲಿ ಹಾಗೂ ಕೆಲವು ಹೆಚ್ಚುವರಿ ರೈಲುಗಳಲ್ಲಿ ವೈ-ಫೈ ವ್ಯವಸ್ಥೆಯನ್ನು ಕಲ್ಪಿಸಲಾಗುವುದು...
ಸುರೇಶ್ ಪ್ರಭು
ಸುರೇಶ್ ಪ್ರಭು
ತಿರುವನಂತಪುರಂ: 2017ರಲ್ಲಿ ಮತ್ತೆ 200 ರೈಲ್ವೆ ನಿಲ್ದಾಣಗಳಲ್ಲಿ ಹಾಗೂ ಕೆಲವು ಹೆಚ್ಚುವರಿ ರೈಲುಗಳಲ್ಲಿ ವೈ-ಫೈ ವ್ಯವಸ್ಥೆಯನ್ನು ಕಲ್ಪಿಸಲಾಗುವುದು ಎಂದು ರೈಲ್ವೆ ಸಚಿವ ಸುರೇಶ್ ಪ್ರಭು ಅವರು ಸೋಮವಾರ ಹೇಳಿದ್ದಾರೆ.
ಕಣ್ಣೂರು, ಎರ್ನಾಕೂಲಂ ಮತ್ತು ಕೊಲ್ಲಂನ ರೈಲ್ವೆ ಗ್ರಾಹಕರಿಗೆ ಆರು ವೈ-ಫೈ ಸೌಲಭ್ಯಗಳಿಗೆ ಚಾಲನೆ ನೀಡಿ ಮಾತನಾಡಿದ ಸುರೇಶ್ ಪ್ರಭು, ಈ ವರ್ಷ ಒಟ್ಟು 100 ರೈಲ್ವೆ ನಿಲ್ದಾಗಳಲ್ಲಿ ವೈ-ಫೈ ಸೌಲಭ್ಯ ಕಲ್ಪಿಸಲಾಗಿದ್ದು, ಮುಂದಿನ ವರ್ಷ 200 ರೈಲ್ವೆ ನಿಲ್ದಾಣಗಳಲ್ಲಿ ಈ ಸೌಲಭ್ಯ ಕಲ್ಪಿಸುವ ಗುರಿ ಹೊಂದಲಾಗಿದೆ ಎಂದರು.
ಸಣ್ಣ ನಗರ ಮತ್ತು ಪಟ್ಣದ ಎಲ್ಲಾ ರೈಲು ನಿಲ್ದಾಣಗಳಲ್ಲೂ ವೈಫೈ ಸೌಲಭ್ಯ ಕಲ್ಪಿಸುವ ಗುರಿ ಹೊಂದಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ. ಅಲ್ಲದೆ ರೈಲ್ವೆ ನಿಲ್ದಾಣಗಳಲ್ಲಿ ಎಸ್ಕೇಲೇಟರ್ ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com