ಕಪ್ಪು ಹಣ ಬಿಳಿ ಮಾಡಲು 700 ಜನರನ್ನು ಬಳಿಸಿಕೊಂಡ ಗುಜರಾತ್ ಉದ್ಯಮಿ

ಸೂರತ್ ಮೂಲದ ಫೈನಾನ್ಶಿಯರೊಬ್ಬರು ತನ್ನ ಕಪ್ಪು ಹಣವನ್ನು ಬಿಳಿ ಮಾಡಿಕೊಳ್ಳಲು ಸುಮಾರು 700ರನ್ನು ಬಳಸಿಕೊಂಡಿದ್ದು,...
ಕಿಶೋರ್ ಭಜಿಯವಾಲಾ
ಕಿಶೋರ್ ಭಜಿಯವಾಲಾ
ಅಹಮದಾಬಾದ್: ಸೂರತ್ ಮೂಲದ ಫೈನಾನ್ಶಿಯರೊಬ್ಬರು ತಮ್ಮ ಕಪ್ಪು ಹಣವನ್ನು ಬಿಳಿ ಮಾಡಿಕೊಳ್ಳಲು ಸುಮಾರು 700ರನ್ನು ಬಳಸಿಕೊಂಡಿದ್ದು, ಅವರ ಮೂಲಕ ಕಪ್ಪು ಹಣ ಜಮೆ ಮಾಡಿ, ವಾಪಸ್ ಹೊಸ ನೋಟ್ ಪಡೆದುಕೊಂಡಿದ್ದಾರೆ ಎಂದು ಸಿಬಿಐ ಮೂಲಗಳು ತಿಳಿಸಿವೆ.
ಫೈನಾನ್ಶಿಯರ್ ಕಿಶೋರ್ ಭಜಿಯವಾಲ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದು, ದಾಳಿಯ ವೇಳೆ ಸಿಕ್ಕ 10.45 ಕೋಟಿ ರುಪಾಯಿಯನ್ನು ಜಪ್ತಿ ಮಾಡಿದ್ದಾರೆ. ಅಲ್ಲದೆ ಭಜಿಯವಾಲ ಬಳಿ ಸುಮಾರು 400 ಕೋಟಿ ರುಪಾಯಿ ಮೌಲ್ಯದ ಅಕ್ರಮ ಆಸ್ತಿ ಸಹ ಪತ್ತೆಯಾಗಿದೆ ಎನ್ನಲಾಗಿದೆ.
ಆದಾಯ ತೆರಿಗೆ ಇಲಾಖೆ ಮೂಲಗಳ ಪ್ರಕಾರ, ಭಜಿಯಾವಾಲ 27 ಬ್ಯಾಂಕ್ ಖಾತೆಗಳನ್ನು ಹೊಂದಿದ್ದು, ಅವುಗಳ ಪೈಕಿ 20 ಬೇನಾಮಿ ಖಾತೆಗಳಾಗಿವೆ. ಈ ಖಾತೆಗಳ ಮೂಲಕ ದೊಡ್ಡ ಮೊತ್ತದ ಹಣ ವಹಿವಾಟು ನಡೆಸಿದ್ದಾರೆ. 
ಈ ಸಂಬಂಧ ಭಜಿಯವಾಲಾ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿಕೊಂಡಿದ್ದು, 700 ವ್ಯಕ್ತಿಗಳ ಮೂಲಕ ತಲಾ 1 ಲಕ್ಷ, 2 ಲಕ್ಷ ಹಾಗೂ 4 ಲಕ್ಷ ರುಪಾಯಿಯಂತೆ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಿದ್ದಾರೆ ಎಂದು ಸಿಬಿಐ ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com