ಬರನ್: ನೋಟ್ ನಿಷೇಧ ಸಮಸ್ಯೆಗಳಿಗೆ ಕೊನೆಯೇ ಇಲ್ಲ ಎಂದಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು, ನೀವು ಭರವಸೆ ನೀಡಿದಂತೆ ಡಿಸೆಂಬರ್ 30ರ ನಂತರ ನಗದು ಬಿಕ್ಕಟ್ಟು ಸಮಸ್ಯೆ ಅಂತ್ಯವಾಗಲಿದೆಯೇ? ಎಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಶ್ನಿಸಿದ್ದಾರೆ.
ಇಂದು ಕಾಂಗ್ರೆಸ್ ಬಹಿರಂಗಸಭೆ ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ನೋಟ್ ನಿಷೇಧದಿಂದ ಉಂಟಾಗಿರುವ ನಗದು ಬಿಕ್ಕಟ್ಟಿನಿಂದ ಬಡವರಿಗೆ, ರೈತರಿಗೆ ಮತ್ತು ಕಾರ್ಮಿಕರು ತೊಂದರೆ ಅನುಭವಿಸುತ್ತಿದ್ದಾರೆ ಎಂದರು.
ಡಿಸೆಂಬರ್ 30ರ ನಂತರ ಎಲ್ಲಾ ಸಮಸ್ಯೆಗಳಿಗೂ ಬ್ರೇಕ್ ಬಿಳಲಿದೆ ಎಂದು ಮೋದಿಜಿ ಹೇಳಿದ್ದಾರೆ. ಆದರೆ ಅದು ಸಾಧ್ಯವಿಲ್ಲ. ನಗದು ಸಮಸ್ಯೆ ಇನ್ನೂ ಆರರಿಂದ ಏಳು ತಿಂಗಳು ಮುಂದುವರೆಯಲಿದೆ ಎಂದು ಕಾಂಗ್ರೆಸ್ ನಾಯಕ ಹೇಳಿದ್ದಾರೆ.
ನೋಟ್ ನಿಷೇಧದ ನಂತರ ಬಡವರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಈ ಸಮಸ್ಯೆಗಳ ಪರಿಹಾರಕ್ಕೆ ಕೇಂದ್ರದ ಮೋದಿ ಸರ್ಕಾರ ಹಾಗೂ ರಾಜಸ್ಥಾನ ಸರ್ಕಾರ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ರಾಹುಲ್ ವಾಗ್ದಾಳಿ ನಡೆಸಿದರು.