ಶ್ರೀರಾಮನಿಗೆ ಬೆಳ್ಳಿ ಕಿರೀಟ ಅರ್ಪಿಸಿದ ಭಿಕ್ಷುಕ ತೆಲಂಗಾಣದ ನಲ್ಗೊಂಡ ಜಿಲ್ಲೆಯ 75 ವರ್ಷದ ಯಾದಿರೆಡ್ಡಿ ಎಂದು ತಿಳಿದುಬಂದಿದೆ. ಯುವಕನಾಗಿದ್ದಾಗ ವಿಜಯವಾಡಗೆ ಬಂದ ಯಾದಿರೆಡ್ಡಿ ಹಲವು ಕೆಲಸಗಳನ್ನು ಮಾಡಿ ಜೀವನ ನಡೆಸಿದ್ದರು. ಅದರಲ್ಲಿ 45 ವರ್ಷಗಳ ಕಾಲ ರಿಕ್ಷಾ ಓಡಿಸಿ ಜೀವನ ನಡೆಸಿದ್ದರು. ಆದರೆ ದಿನ ಕಳೆದಂತೆ ವಯಸ್ಸು ಕಳೆದ ಯಾದಿರೆಡ್ಡಿ ನಗರದ ಪ್ರಮುಖ ರಸ್ತೆಗಳಲ್ಲಿ ಭಿಕ್ಷೆ ಬೇಡಲು ನಿಂತರು. ಸಂಸಾರದ ಜಂಜಾಟವಿಲ್ಲದ ಯಾದಿರೆಡ್ಡಿ ಜೀವನಕ್ಕಿಂತ ಹೆಚ್ಚಿಗೆ ಬಂದ ಹಣವನ್ನು ದೈವಿಕ ಕಾರ್ಯಗಳಿಗೆ ವಿನಿಯೋಗಿಸುತ್ತಿದ್ದರು.