ಪಕ್ಷದ ತೇಜೋವಧೆಗಾಗಿ ಬಿಜೆಪಿಯಿಂದ ಸುಳ್ಳು ಪ್ರಚಾರ: ಆಪ್

ದೇಣಿಗೆ ಸಂಗ್ರಹದ ವಿಚಾರವಾಗಿ ಪಕ್ಷದ ವಿರುದ್ಧ ಆರೋಪ ಕೇಳಿಬಂದಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆಮ್ ಆದ್ಮಿ ಪಕ್ಷ ಬಿಜೆಪಿ ತನ್ನ ತೇಜೋವಧೆಗಾಗಿ ಸುಳ್ಳು ಪ್ರಚಾರ ಮಾಡುತ್ತಿದೆ ಎಂದು ಹೇಳಿದೆ.
ಆಮ್ ಆದ್ಮಿ ಪಕ್ಷ
ಆಮ್ ಆದ್ಮಿ ಪಕ್ಷ
ನವದೆಹಲಿ: ದೇಣಿಗೆ ಸಂಗ್ರಹದ ವಿಚಾರವಾಗಿ ಪಕ್ಷದ ವಿರುದ್ಧ ಆರೋಪ ಕೇಳಿಬಂದಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆಮ್ ಆದ್ಮಿ ಪಕ್ಷ ಬಿಜೆಪಿ ತನ್ನ ತೇಜೋವಧೆಗಾಗಿ ಸುಳ್ಳು ಪ್ರಚಾರ ಮಾಡುತ್ತಿದೆ ಎಂದು ಹೇಳಿದೆ. 
ಪಕ್ಷಕ್ಕೆ ಬಂದಿರುವ ಬಹುತೇಕ ದೇಣಿಗೆ ಬಂದಿರುವುದು ಬ್ಯಾಂಕಿಂಗ್ ವ್ಯವಸ್ಥೆಯಿಂದ ಆಗಿದ್ದು, ದೇಶದಲ್ಲಿ ನಗದು ರಹಿತ ಪಕ್ಷವಾಗಿರುವ ಏಕೈಕ ಪಕ್ಷವೆಂದರೆ ಅದು ಆಮ್ ಆದ್ಮಿ ಪಕ್ಷವಾಗಿದೆ ಎಂದು ಆಪ್ ನಾಯಕ ದಿಲೀಪ್ ಪಾಂಡೇ ಹೇಳಿದ್ದಾರೆ. ದೇಣಿಗೆ ವಿಷಯದಲ್ಲಿ ಬಿಜೆಪಿ ಆಮ್ ಆದ್ಮಿ ಪಕ್ಷದ ವಿರುದ್ಧ ಸುಳ್ಳು ಆರೋಪ ಮಾಡುತ್ತಿದೆ. ಬಿಜೆಪಿ ಕಳೆದ ಮೂರು ವರ್ಷಗಳಿಂದ ಇದೇ ತಂತ್ರ ರೂಪಿಸುತ್ತಿದೆ ಎಂದು ದಿಲೀಪ್ ಪಾಂಡೇ ಆರೋಪಿಸಿದ್ದಾರೆ. 
ಆಮ್ ಆದ್ಮಿ ಪಕ್ಷ ಸ್ವೀಕರಿಸಿರುವ ದೇಣಿಗೆಗಳ ಪೈಕಿ ಶೇ.92 ರಷ್ಟು ಬ್ಯಾಂಕಿಂಗ್ ವ್ಯವಸ್ಥೆಯ ಮೂಲಕವೇ ಪಡೆದಿದೆ. ಉಳಿದ ಶೇ.8 ರಷ್ಟನ್ನು ಮಾತ್ರ ನಗದಲ್ಲಿ ಪಡೆದಿದೆ. ಆದರೆ ಬಿಜೆಪಿ ಅಪಪ್ರಚಾರ ಮಾಡುವ ಮೂಲಕ ಜನರನ್ನು ದಾರಿ ತಪ್ಪಿಸುತ್ತಿದೆ ಎಂದು ದಿಲೀಪ್ ಪಾಂಡೆ ಹೇಳಿದ್ದಾರೆ. ಕೇವಲ ಆರೋಪ ಮಾಡುವುದು ಸುಲಭ ಆದರೆ ಬಿಜೆಪಿಗೆ ಧೈರ್ಯವಿದ್ದರೆ ತಪ್ಪಿತಸ್ಥರನ್ನು ಬಂಧಿಸಲಿ ಎಂದು ಆಮ್ ಆದ್ಮಿ ಪಕ್ಷದ ನಾಯಕ ಅಶುತೋಷ್ ಸವಾಲು ಹಾಕಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com