ಶೀಘ್ರದಲ್ಲೇ ಡಿಜಿಟಲ್ ಪಾವತಿ ಮಾಹಿತಿಗಾಗಿ ಟೋಲ್-ಫ್ರೀ ಸಂಖ್ಯೆ 14444 ಕಾರ್ಯಾರಂಭ: ಕೇಂದ್ರ

ಡಿಜಿಟಲ್ ಪಾವತಿ ಕುರಿತಾದ ಮಾಹಿತಿಗಾಗಿ ದೇಶವ್ಯಾಪ್ತಿ ಸಹಾಯವಾಣಿ 14444 ಸಂಖ್ಯೆಗೆ ಕರೆ ಮಾಡಬಹುದಾಗಿದ್ದು, ಶೀಘ್ರದಲ್ಲೇ ಈ ವ್ಯವಸ್ಥೆ ಕಾರ್ಯಾರಂಭಿಸಲಿದೆ...
ಡಿಜಿಟಲ್ ಪಾವತಿ
ಡಿಜಿಟಲ್ ಪಾವತಿ
ನವದೆಹಲಿ: ಡಿಜಿಟಲ್ ಪಾವತಿ ಕುರಿತಾದ ಮಾಹಿತಿಗಾಗಿ ದೇಶವ್ಯಾಪ್ತಿ ಸಹಾಯವಾಣಿ 14444 ಸಂಖ್ಯೆಗೆ ಕರೆ ಮಾಡಬಹುದಾಗಿದ್ದು, ಶೀಘ್ರದಲ್ಲೇ ಈ ವ್ಯವಸ್ಥೆ ಕಾರ್ಯಾರಂಭಿಸಲಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. 
ನೋಟು ನಿಷೇಧದ ಬಳಿಕ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಉತ್ತೇಜಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿತ್ತು. ಅಂದರಂತೆ ನ್ಯಾಸ್ಕಾಂ ಸಹಾಯ ಕೋರಿತ್ತು. ಇದೀಗ ನ್ಯಾಸ್ಕಾಂ, ಟೆಲಿಕಾಂ ಆಪರೇಟರ್ಸ್, ಎನ್ಐಟಿಐ ಆಯೋಗ ಜಂಟಿಯಾಗಿ ಜನರಿಗೆ ಮಾಹಿತಿ ನೀಡಲಿವೆ. 
ಡಿಜಿಟಲ್ ಪಾವತಿ ಕುರಿತಂತೆ ಮಾಹಿತಿಗಾಗಿ ದೇಶದ ಜನತೆ ಸಹಾಯವಾಣಿ 14444 ಕರೆ ಮಾಡಬಹುದು. ಈ ಎಲ್ಲಾ ಕರೆಗಳಿಗೂ ಐಟಿ ಉದ್ಯಮ ಸಂಸ್ಥೆ ನ್ಯಾಸ್ಕಾಂ, ಟೆಲಿಕಾಂ ಆಪರೇಟರ್ಸ್ ಉತ್ತರಿಸಲಿದ್ದಾರೆ. ಈ ಸಹಾಯವಾಣಿ ಶೀಘ್ರದಲ್ಲೇ ಕಾರ್ಯನಿರ್ವಹಿಸಲಿದೆ ಎಂದು ಎನ್ಐಟಿಐ ಆಯೋಗದ ಉಪಾಧ್ಯಕ್ಷ ಅರವಿಂದ್ ಪನಗರಿಯಾ ಹೇಳಿದ್ದಾರೆ. 
ಡಿಜಿಟಲ್ ಪಾವತಿ ಕುರಿತಂತೆ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ನಾಲ್ಕನೇ ಸಭೆ ಬಳಿಕ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ದೇಶದಾದ್ಯಂತ ಡಿಜಿಟಲ್ ಪಾವತಿಗಾಗಿ ಒಂದು ಮಿಲಿಯನ್ ಪಿಓಎಸ್ ಯಂತ್ರಗಳನ್ನು ಆಮದು ಮಾಡಿಕೊಳ್ಳಲಾಗಿದೆ ಎಂದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com