ದೆಹಲಿ: ನಕಲಿ ಖಾತೆಯಲ್ಲಿ 34 ಕೋಟಿ ರೂ.; ಕೊಟಾಕ್ ಮಹಿಂದ್ರಾ ಬ್ಯಾಂಕ್ ಮ್ಯಾನೇಜರ್ ಬಂಧನ

ನೋಟುಗಳ ಅಮಾನ್ಯತೆ ನಂತರ 34 ಕೋಟಿ ರೂಪಾಯಿಗಳಷ್ಟು ಹಣವನ್ನು 9 ನಕಲಿ ಖಾತೆಗಳ ಮೂಲಕ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ:  ನೋಟುಗಳ ಅಮಾನ್ಯತೆ ನಂತರ 34 ಕೋಟಿ ರೂಪಾಯಿಗಳಷ್ಟು ಹಣವನ್ನು 9 ನಕಲಿ ಖಾತೆಗಳ ಮೂಲಕ ಠೇವಣಿಯಿರಿಸಿ ಹಣದ ಕಳ್ಳಸಾಗಣೆ ಪ್ರಕರಣ  ತನಿಖೆಗೆ ಸಂಬಂಧಪಟ್ಟಂತೆ ಜಾರಿ ನಿರ್ದೇಶನಾಲಯ ಕೊಟಾಕ್ ಮಹಿಂದ್ರಾ ಬ್ಯಾಂಕ್ ನ ವ್ಯವಸ್ಥಾಪಕರನ್ನು ಬಂಧಿಸಿದೆ.
ದೆಹಲಿಯ ಕೆ.ಜಿ.ಮಾರ್ಗ್ ಪ್ರದೇಶದ ಕೊಟಾಕ್ ಮಹಿಂದ್ರಾ ಬ್ಯಾಂಕ್ ನ ವ್ಯವಸ್ಥಾಪಕರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವ್ಯವಸ್ಥಾಪಕರನ್ನು ಹಣ ಕಳ್ಳಸಾಗಣೆ  ತಡೆಗಟ್ಟುವಿಕೆ ಕಾಯ್ದೆಯಡಿ ಬಂಧಿಸಲಾಗಿದ್ದು ಮುಂದಿನ ಕಸ್ಟಡಿಗೆ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಾರಿ ನಿರ್ದೇಶನಾಲಯ ಅಧಿಕಾರಿಗಳು ಕೇಸು ಸ್ವೀಕರಿಸಿ ಎಫ್ ಐಆರ್ ದಾಖಲಿಸಿದ್ದಾರೆ. 
ಪೊಲೀಸರು ಕಳೆದ ವಾರ ಈ ಪ್ರಕರಣ ಸಂಬಂಧ ಇಬ್ಬರನ್ನು ಬಂಧಿಸಿದ್ದರು.ಆದರೆ ತಮ್ಮಲ್ಲಿ ಯಾವುದೇ ನಕಲಿ ಖಾತೆಗಳನ್ನು ತೆರೆದಿಲ್ಲ. ತನಿಖೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ವಕ್ತಾರರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com