ತ್ಯಾಗಿ ಕುಟುಂಬ ಸದಸ್ಯರಿದ್ದಂತೆ, ಆದರೆ ಆರೋಪ ಸಾಬೀತಾದರೆ ಅನುಕಂಪ ಇಲ್ಲ: ವಾಯುಪಡೆ ಮುಖ್ಯಸ್ಥ

ತ್ಯಾಗಿ ನಮ್ಮ ಕುಟುಂಬದವರಿದ್ದಂತೆ, ಆದರೆ ಅವರ ವಿರುದ್ಧದ ಆರೋಪ ಸಾಬೀತಾದರೆ ಮಾತ್ರ ಅನುಕಂಪ ತೋರುವುದಿಲ್ಲ ಎಂದು ವಾಯುಪಡೆ ಮುಖ್ಯಸ್ಥ ಅರೂಪ್ ರಹಾ ಹೇಳಿದ್ದಾರೆ.
ವಾಯುಪಡೆ ಮುಖ್ಯಸ್ಥ ಅರೂಪ್ ರಹಾ
ವಾಯುಪಡೆ ಮುಖ್ಯಸ್ಥ ಅರೂಪ್ ರಹಾ
ನವದೆಹಲಿ: ಅಗಸ್ಟಾ ವೆಸ್ಟ್ ಲ್ಯಾಂಡ್ ಹಗರಣದಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿರುವ ವಾಯುಪಡೆ ಮಾಜಿ ಮುಖ್ಯಸ್ಥ ಎಸ್ ಪಿ ತ್ಯಾಗಿ ಬಗ್ಗೆ ವಾಯುಪಡೆಯ ಹಾಲಿ ಮುಖ್ಯಸ್ಥ ಅರೂಪ್‌ ರಹಾ, ಆರೋಪ ಎದುರಿಸುತ್ತಿರುವ ಅರೂಪ್ ರಹಾ  ತ್ಯಾಗಿ ನಮ್ಮ ಕುಟುಂಬದವರಿದ್ದಂತೆ, ಆದರೆ ಅವರ ವಿರುದ್ಧದ ಆರೋಪ ಸಾಬೀತಾದರೆ ಮಾತ್ರ ಅನುಕಂಪ ತೋರುವುದಿಲ್ಲ ಎಂದು ಹೇಳಿದ್ದಾರೆ. 
ನಿವೃತ್ತಿಯಾಗುವುದಕ್ಕೂ ಕೆಲವೇ ದಿನಗಳ ಮುನ್ನ ಅರೂಪ್ ರಹಾ ಪತ್ರಿಕಾಗೋಷ್ಠಿ ನಡೆಸಿದ್ದು, ದೇಶದ ಕಾನೂನನ್ನು ಎಲ್ಲರೂ ಪಾಲಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಸೇನೆಯ ಯಾವುದೇ ವಿಭಾಗದ ಮುಖ್ಯಸ್ಥರಾಗಿದ್ದವರು ಈ ವರೆಗೂ ಭ್ರಷ್ಟಾಚಾರದ ಆರೋಪದಲ್ಲಿ ಬಂಧನಕ್ಕೊಳಗಾಗಿರಲಿಲ್ಲ. ಬಂಧನಕ್ಕೊಳಗಾಗಿರುವ ಮೊದಲ ಮಾಜಿ ಮುಖ್ಯಸ್ಥ ಎಸ್ ಪಿ ತ್ಯಾಗಿಯಾಗಿದ್ದು, ಒಂದು ವೇಳೆ ತ್ಯಾಗಿಯ ವಿರುದ್ಧ ಆರೋಪ ಸಾಬೀತಾದರೆ ಸೇನಾ ಪಡೆಗೆ ಅದು ಕೆಟ್ಟ ಹೆಸರು ತರಲಿದೆ ಎಂದು ಅರೂಪ್ ರಹಾ ತಿಳಿಸಿದ್ದಾರೆ. 
ಅಗಸ್ಟಾ ಹಗರಣದಲ್ಲಿ ಸೇನಾ ಪಡೆಗೆ ಸಂಬಂಧಿಸಿದವರು ಮಾತ್ರ ಭಾಗಿಯಾಗಿಲ್ಲ. ಬೇರೆ ಸಂಸ್ಥೆಗಳಲ್ಲಿದ್ದವರೂ ಶಾಮೀಲಾಗಿದ್ದಾರೆ. ಕೇವಲ ಒಂದು ಸಂಸ್ಥೆ ಅಥವಾ ಸೇವೆಯ ವಿರುದ್ಧ ಆರೋಪ ಮಾಡುವುದು ಸೂಕ್ತವಲ್ಲ. ಹಗರಣದ ಸಂಬಂಧ ತನಿಖೆ ನಡೆಯುತ್ತಿದೆ ಈ ಹಂತದಲ್ಲಿ ಏನನ್ನೂ ಹೇಳಲು ಸಾಧ್ಯವಿಲ್ಲ ಎಂದು ಅರೂಪ್ ರಹಾ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com