ಆರ್ ಬಿಐ ಉಪ ಗವರ್ನರ್ ಆಗಿ ವಿರಳ್ ಆಚಾರ್ಯ ನೇಮಕ

ನ್ಯೂಯಾರ್ಕ್ ವಿವಿಯ ಅರ್ಥಶಾಸ್ತ್ರ ಪ್ರೊಫೆಸರ್ ವಿರಳ್ ಆಚಾರ್ಯ ಅವರನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಉಪ ಗವರ್ನರ್ ಆಗಿ ನೇಮಿಸಿ ಕೇಂದ್ರ ಸರ್ಕಾರ ...
ವಿರಳ್ ಆಚಾರ್ಯ
ವಿರಳ್ ಆಚಾರ್ಯ

ಮುಂಬಯಿ: ನ್ಯೂಯಾರ್ಕ್ ವಿವಿಯ ಅರ್ಥಶಾಸ್ತ್ರ ಪ್ರೊಫೆಸರ್ ವಿರಳ್ ಆಚಾರ್ಯ ಅವರನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಉಪ ಗವರ್ನರ್ ಆಗಿ ನೇಮಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.

ಆರ್ ಬಿ ಐ ನ ನಾಲ್ಕು ಉಪ ಗವರ್ನರ್ ಗಳಲ್ಲಿ ವಿರಳ್ ಆಚಾರ್ಯ ಕೂಡ ಒಬ್ಬರಾಗಿದ್ದು, ಮೂರು ವರ್ಷ ಇವರ ಅಧಿಕಾರ ಅವಧಿ ಇರುತ್ತದೆ. ಊರ್ಜಿತ್ ಪಟೇಲ್ ಆರ್ ಬಿ ಐ ಗವರ್ನರ್ ಆಗಿ ಬಡ್ತಿ ಹೊಂದಿದ ನಂತರ ತೆರವಾಗಿದ್ದ ಉಪ ಗವರ್ನರ್ ಹುದ್ದೆಗೆ ವಿರಳ್ ಆಚಾರ್ಯರನ್ನು ನೇಮಿಸಲಾಗಿದೆ.

ಊರ್ಜಿತ್ ಪಟೇಲ್ ಆರ್ ಬಿಐ ನ ಪ್ರಸಿದ್ಧ ವಿತ್ತೀಯ ನೀತಿ ವಿಭಾಗದ ಮುಖ್ಯಸ್ಥರಾಗಿದ್ದರು, ಆದರೆ ವಿರಳ್ ಆಚಾರ್ಯ ಅವರಿಗೆ ಯಾವ ಸ್ಥಾನ ನೀಡಲಾಗಿದೆ ಎಂಬುದನ್ನು ಪ್ರಕಟಣೆಯಲ್ಲಿ ತಿಳಿಸಿಲ್ಲ. ನ್ಯೂಯಾರ್ಕ್ ವಿವಿಯ ಸ್ಟರ್ನ್ ಸ್ಕೂಲ್ ಆಪ್ ಬ್ಯುಸಿನೆಸ್ ನಲ್ಲಿ  ಪ್ರೊಫೆಸರ್ ಆಗಿ  ಕೆಲಸ ಮಾಡುತ್ತಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com