ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದ್ದ ವಿದ್ಯಾರ್ಥಿಗೆ ನೆರವಾಯ್ತು ಕ್ರೌಡ್ ಫಂಡಿಂಗ್!

ಈ ವರ್ಷ ಹಲವು ಸ್ಟಾರ್ಟ್ ಅಪ್, ಕಲಾವಿದರು ಸಾರ್ವಜನಿಕ ಚಳುವಳಿಗಳಿಗೆ ಕ್ರೌಡ್ ಫಂಡಿಂಗ್ ಜೀವಸೆಲೆಯಾಗಿತ್ತು. ಕಲೆ, ಸ್ಟಾರ್ಟ್ ಅಪ್ ಗಳನ್ನು ಹೊರತುಪಡಿಸಿ ಕ್ರೌಡ್ ಫಂಡಿಂಗ್ ಓರ್ವ ವಿದ್ಯಾರ್ಥಿಯ ವಿದ್ಯಾಭ್ಯಾಸಕ್ಕೆ ನೆರವಾಗಿದೆ ಎಂಬುದು ಮತ್ತೊಂದು ವಿಶೇಷ.
ನದೀಮ್ ಅಕ್ರಮ್
ನದೀಮ್ ಅಕ್ರಮ್
ಬೆಂಗಳೂರು: ಈ ವರ್ಷ ಹಲವು ಸ್ಟಾರ್ಟ್ ಅಪ್, ಕಲಾವಿದರು ಸಾರ್ವಜನಿಕ ಚಳುವಳಿಗಳಿಗೆ ಕ್ರೌಡ್ ಫಂಡಿಂಗ್ ಜೀವಸೆಲೆಯಾಗಿತ್ತು. ಕಲೆ, ಸ್ಟಾರ್ಟ್ ಅಪ್ ಗಳನ್ನು ಹೊರತುಪಡಿಸಿ ಕ್ರೌಡ್ ಫಂಡಿಂಗ್ ಓರ್ವ ವಿದ್ಯಾರ್ಥಿಯ ವಿದ್ಯಾಭ್ಯಾಸಕ್ಕೆ ನೆರವಾಗಿದೆ ಎಂಬುದು ಮತ್ತೊಂದು ವಿಶೇಷ.
ನ್ಯೂ ಹರೈಜನ್ ಕಾಲೇಜಿನಲ್ಲಿ ದ್ವಿತೀಯ ವರ್ಷದ ಎಂಸಿಎ ವ್ಯಾಸಂಗ ಮಾಡುತ್ತಿರುವ ನದೀಮ್ ಅಕ್ರಮ್ ಎಂಬ ವಿದ್ಯಾರ್ಥಿಗೆ 35,000 ಕಾಲೇಜು ಶುಲ್ಕ ಪಾವತಿ ಮಾಡಲು ಆರ್ಥಿಕ ಮುಗ್ಗಟ್ಟು ಎದುರಾಗಿತ್ತು. ದಿಕ್ಕುಕಾಣದಂತಾಗಿದ್ದ ವಿದ್ಯಾರ್ಥಿಗೆ ಕ್ರೌಡ್ ಫಂಡಿಂಗ್ ಮೊರೆ ಹೋಗುವಂತೆ ಸ್ನೇಹಿತರು ಸಲಹೆ ನೀಡಿದ್ದಾರೆ. ಸ್ನೇಹಿತರ ಸಲಹೆಯಂತೆ ನದೀಮ್ ಅಕ್ರಮ್ ಕ್ರೌಡ್ ಫಂಡಿಂಗ್ ವೇದಿಕೆ ಮಿಲಾಪ್ ನಲ್ಲಿ ಡಿ.19 ರಂದು ಪೇಜ್ ಪ್ರಾಂಭಿಸಿದ್ದಾರೆ. ಪೇಜ್ ಪ್ರಾರಂಭಿಸಿದ ಕೇವಲ ಒಂದು ದಿನದಲ್ಲೇ ನದೀಮ್ ಕಾಲೇಜಿಗೆ ಪಾವತಿ ಮಾಡಬೇಕಿದ್ದ ಹಣ ಪಡೆದಿದ್ದಾರೆ. ಕ್ರೌಡ್ ಫಂಡಿಂಗ್ ನೆರವಿನ ಬಗ್ಗೆ ಪ್ರತಿಕ್ರಿಯೆ ನೀಡಿರುವ ನದೀಮ್ ಅಕ್ರಮ್, ನನಗೆ ಸಹಾಯ ಮಾಡಿರುವವರು ನನಗೆ ವೈಯಕ್ತಿಕವಾಗಿ ಪರಿಚಯವಿಲ್ಲ. ಆದರೆ ಅವರ ಕೊಡುಗೆಯಿಂದ ನನಗೆ ಸಹಾಯವಾಗಿದೆ ಎಂದು ಹೇಳಿದ್ದಾರೆ. 
ಭಾರತೀಯರಷ್ಟೇ ಅಲ್ಲದೇ ಅಮೆರಿಕನ್ನರೂ ಸಹ ನದೀಮ್ ಗೆ ಸಹಾಯ ಮಾಡಿದ್ದು, 400 ಡಾಲರ್ ನಷ್ಟು ಹಣವನ್ನು ಕಳಿಸಿದ್ದಾರೆ. ಅವರ ಹೆಸರು ನನಗೆ ಗೊತ್ತಿಲ್ಲ ಆದರೆ ಅವರಿಗೆ ಕೃತಜ್ಞನಾಗಿರುತ್ತೇನೆ ಎಂದು ನದೀಮ್ ಹೇಳಿದ್ದಾರೆ. ಮಗನಿಗೆ ದೊರೆತ ಸಹಾಯದಿಂದ ಸಂತೋಷಗೊಂಡಿರುವ ನದೀಪ್ ಪೋಷಕರು, ಸಮಾಜದಿಂದ ದೊರೆತ ಸಹಾಯವನ್ನು ಮುಂದೊಂದು ದಿನ ಮತ್ತೊಬ್ಬರಿಗೆ ಸಹಕಾರಿಯಾಗುವ ನಿಟ್ಟಿನಲ್ಲಿ ವಪಾಸ್ ನೀಡುವಂತೆ ಹೇಳಿದ್ದಾರೆ. ಕ್ರೌಡ್ ಫಂಡಿಂಗ್ ಗೂ ಮುನ್ನ ದಾರಿ ಕಾಣದಾಗಿದ್ದ ನಾನು ವಿದ್ಯಾಭ್ಯಾಸ ಮುಂದುವರೆಸಲು ವಿದ್ಯಾಭ್ಯಾಸ ಮೊಟಕುಗೊಳಿಸಿ ದುಡಿಯಬೇಕೆಂಬ ಆಲೋಚನೆ ಮಾಡಿದ್ದೆ ಎಂದು ನದೀಮ್ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com