ನೋಟು ನಿಷೇಧ: ಸಾಲ ಮರು ಪಾವತಿ ಅವಧಿ 90 ದಿನಗಳಿಗೆ ವಿಸ್ತರಣೆ

ನೋಟುಗಳ ರದ್ದತಿ ಪರಿಣಾಮ, ನೋಟುಗಳ ಅಭಾವ ಎದುರಾಗಿರುವ ಹಿನ್ನೆಲೆಯಲ್ಲಿ ಬ್ಯಾಂಕ್ ಗಳಲ್ಲಿ ಸಾಲ ಪಡೆದಿರುವ ಗ್ರಾಹಕರಿಗೆ ಸಾಲ ಮರುಪಾವತಿ ಮಾಡಲು ಇದ್ದ ಅವಧಿಯನ್ನು 90 ದಿನಗಳವರೆಗೆ ವಿಸ್ತರಣೆ
ಆರ್ ಬಿಐ
ಆರ್ ಬಿಐ
ನವದೆಹಲಿ: 500, 1000 ರೂ ನೋಟುಗಳ ರದ್ದತಿ ಪರಿಣಾಮ, ನೋಟುಗಳ ಅಭಾವ ಎದುರಾಗಿರುವ ಹಿನ್ನೆಲೆಯಲ್ಲಿ ಬ್ಯಾಂಕ್ ಗಳಲ್ಲಿ ಸಾಲ ಪಡೆದಿರುವ ಗ್ರಾಹಕರಿಗೆ ಸಾಲ ಮರುಪಾವತಿ ಮಾಡಲು ಇದ್ದ ಅವಧಿಯನ್ನು 90 ದಿನಗಳವರೆಗೆ ವಿಸ್ತರಿಸಲಾಗಿದೆ. ಆರ್ ಬಿಐ ಈ ಬಗ್ಗೆ ಅಧಿಕೃತಪಡಿಸಿದ್ದು,  ನ.1 ರಿಂದ ಡಿ.31 ರವರೆಗೆ ಪಾವತಿ ಮಾಡಬೇಕಿರುವವರಿಗೆ ಮಾತ್ರ 90 ದಿನಗಳ ಹೆಚ್ಚುವರಿ ಕಾಲಾವಕಾಶ ಅನ್ವಯವಾಗಲಿದೆ ಎಂದು ಹೇಳಿದೆ. ಇದಕ್ಕೂ ಮುನ್ನ ನವೆಂಬರ್ 21 ರಂದು 60 ದಿನಗಳ ವರೆಗೆ ವಿಸ್ತರಿಸಿ ಆರ್ ಬಿಐ ಆದೇಶ ಹೊರಡಿಸಿತ್ತು.
ನವೆಂಬರ್‌ 1ರಿಂದ ಡಿಸೆಂಬರ್‌ 31ರೊಳಗೆ ಪಾವತಿಸಬೇಕಾಗಿದ್ದ 1 ಕೋಟಿ ರೂ. ಅಥವಾ ಅದಕ್ಕಿಂತ ಕಮ್ಮಿ ಸಾಲಗಳಿಗೆ ಈ ಹೆಚ್ಚುವರಿ ಕಾಲಾವಧಿ ಅನ್ವಯಿಸುತ್ತದೆ.  ಒಂದು ಕೋಟಿ ರೂ ಗಿಂತ ಕಡಿಮೆ ಇರುವ ವ್ಯಾಪಾರ ಅಥವಾ ವೈಯಕ್ತಿಕ ವಿಭಾಗದ ದೀರ್ಘಾವಧಿಯ ಸಾಲ, ಬ್ಯಾಂಕೇತರ ಹಣಕಾಸು ಕಂಪನಿ (ಮೈಕ್ರೋ ಫೈನಾನ್ಸ್ ಸಂಸ್ಥೆ)ಗಳ ಸಾಲದ ಕಂತುಗಳಿಗೂ ಇದೇ ನಿಯಮ ಅನ್ವಯವಾಗಲಿದೆ ಎಂದು ಆರ್ ಬಿಐ ಸ್ಪಷ್ಟಪಡಿಸಿದೆ. ಆರ್ ಬಿಐ ನೀಡಿರುವ ಹೆಚ್ಚುವರಿ ಕಾಲಾವಕಾಶ ಗೃಹ ಸಾಲ, ಕೃಷಿ ಸಾಲಗಳಿಗೂ ಅನ್ವಯಿಸಲಿದ್ದು ಎಲ್ಲಾ ನಿಯಂತ್ರಿತ ಹಣಕಾಸು ಸಂಸ್ಥೆಗಳು ಆರ್ ಬಿಐ ನ ನಿಯಮಗಳನ್ನು ಪಾಲಿಸಬೇಕು ಎಂದು ಆರ್ ಬಿಐ ಹೇಳಿದೆ. ಆರ್ ಬಿಐ ನ ನೂತನ ಕ್ರಮದಿಂದ ಸಾಲಗಾರರ ಖಾತೆಯು ವಸೂಲಿಯಾಗದ ಆಸ್ತಿ (ಎನ್‌ಪಿಎ) ವರ್ಗದಡಿ ಬೀಳುವ ಆತಂಕ ತಾತ್ಕಾಲಿಕವಾಗಿ ದೂರವಾಗಿದೆ.
ನೋಟು ನಿಷೇಧದ ನಂತರ ನಗದು ಮೂಲಕ ನಡೆಯುತ್ತಿದ್ದ ಆರ್ಥಿಕ ಚಟುವಟಿಕೆಗಳು ಕ್ಷೀಣಗೊಂಡಿದ್ದವು ಪರಿಣಾಮ ಸಾಲಗಾರರಿಗೆ ಬ್ಯಾಂಕ್ ಮೂಲಕ ಪಡೆದ ಸಾಲ ಮರುಪಾವತಿ ಮಾಡಲು ಸಾಧ್ಯವಾಗದೇ ವಸೂಲಿಯಾಗಬೇಕಿದ್ದ ಸಾಲದ ಬಾಕಿ ಮೊತ್ತವೂ ಏರಿಕೆಯಾಗುವ ಸಾಧ್ಯತೆ ಇತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com