ಸುರೇಶ್ ಪ್ರಭು
ದೇಶ
ತುಮಕೂರು-ಬಳ್ಳಾರಿ ಹೊಸ ರೈಲು ಮಾರ್ಗ ಉದ್ಘಾಟನೆ
ರಾಯದುರ್ಗ ತುಮಕೂರು ರೈಲ್ವೆ ಯೋಜನೆಯ ಮೊದಲ ಹಂತದ (ತುಮಕೂರು-ಬಳ್ಳಾರಿವರೆಗಿನ) ಹೊಸ ರೈಲು ಮಾರ್ಗ ಡಿ.30 ರಂದು ಉದ್ಘಾಟನೆಯಾಗಿದೆ.
ವಿಜಯವಾಡ: ಭೂಸ್ವಾಧೀನ ಪ್ರಕ್ರಿಯೆ, ಅನುದಾನದ ಮುಗ್ಗಟ್ಟು ಸೇರಿದಂತೆ ಹಲವು ಕಾರಣಗಳಿಂದಾಗಿ ವಿಳಂಬವಾಗಿದ್ದ ರಾಯದುರ್ಗ ತುಮಕೂರು ರೈಲ್ವೆ ಯೋಜನೆಯ ಮೊದಲ ಹಂತದ (ತುಮಕೂರು-ಬಳ್ಳಾರಿವರೆಗಿನ) ಹೊಸ ರೈಲು ಮಾರ್ಗ ಡಿ.30 ರಂದು ಉದ್ಘಾಟನೆಯಾಗಿದೆ.
ವಿಜಯವಾಡದಲ್ಲಿ ನಡೆದ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ ವೇಳೆ ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ವಿಡಿಯೋ ಕಾನ್ಫರೆನ್ಸ್ ಮೂಲಕ ರೈಲನ್ನು ಉದ್ಘಾಟನೆ ಮಾಡಿದ್ದಾರೆ. ರಾಯದುರ್ಗ-ತುಮಕೂರು 40 ಕಿಮಿ ದೂರದ ರೈಲು ಮಾರ್ಗ ಉದ್ಘಾಟನೆಯಾಗಿರುವುದು ತುಮಕೂರು ಹಾಗೂ ಬಳ್ಳಾರಿಯ ಕೈಗಾರಿಕ ವಲಯದಲ್ಲಿ ಹೆಚ್ಚಿನ ಪ್ರಗತಿ, ವಹಿವಾಟಿಗೆ ನೆರವಾಗಲಿದೆ.
ದಕ್ಷಿಣ ರೈಲ್ವೆ ವಲಯ ವಿಭಾಗದಿಂದ ಸುಮಾರು 330 ಕೋಟಿ ರೂಪಾಯಿ ವೆಚ್ಚದಲ್ಲಿ ಮೊದಲ ಹಂತದ ರೈಲು ಮಾರ್ಗವನ್ನು ನಿರ್ಮಿಸಲಾಗಿದ್ದು, ರಾಯದುರ್ಗ, ಕಲ್ಯಾಣದುರ್ಗ ಮಾರ್ಗವಾಗಿ ಸಂಚರಿಸಲಿದ್ದು, ರಸ್ತೆ ಮೇಲ್ಭಾಗದಲ್ಲಿರುವ 6 ಸೇತುವೆ ಹಾಗೂ 16 ಅಂಡರ್ ಬ್ರಿಡ್ಜ್ ಗಳ ಮೂಲಕ ಕ್ರಮಿಸಲಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಡಿ.30 ರಂದು ಉದ್ಘಾಟನೆಯಾಗಿರುವ ತುಮಕೂರು-ರಾಯದುರ್ಗ ರೈಲ್ವೆ ಮಾರ್ಗದ ಯೋಜನೆ 2007-08 ರಲ್ಲಿ ಮಂಜೂರಾತಿ ಪಡೆದು, 2010-11ರಲ್ಲಿ ಅನುಮೋದನೆಗೊಂಡಿತ್ತು. ಈ ಯೋಜನೆಗೆ ಆಂಧ್ರ, ಕರ್ನಾಟಕ ಹಾಗೂ ರೈಲ್ವೆ ಇಲಾಖೆ ಶೇ 50:50 ಅನುಪಾತದಲ್ಲಿ ಯೋಜನೆಗೆ ಹಣ ಹೂಡಿವೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ