ನೋಟು ಚಲಾವಣೆ ರದ್ದು ಬಳಿಕ ಶಿರಡಿ ಸಾಯಿಬಾಬಾ ದೇವಸ್ಥಾನಕ್ಕೆ 31.73 ಕೋಟಿ ದೇಣಿಗೆ

ಕೇಂದ್ರ ಸರ್ಕಾರ ಅಧಿಕ ಮೌಲ್ಯದ ನೋಟುಗಳ ಚಲಾವಣೆಯನ್ನು ಹಿಂತೆಗೆದುಕೊಂಡ ನಂತರ ಕಳೆದ 50...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ಶಿರಿಡಿ: ಕೇಂದ್ರ ಸರ್ಕಾರ ಅಧಿಕ ಮೌಲ್ಯದ ನೋಟುಗಳ ಚಲಾವಣೆಯನ್ನು ಹಿಂತೆಗೆದುಕೊಂಡ ನಂತರ ಕಳೆದ 50 ದಿನಗಳಲ್ಲಿ ಶಿರಡಿ ಸಾಯಿಬಾಬ ಸಂಸ್ಥಾನ ಟ್ರಸ್ಟ್ ಗೆ 31.73 ಕೋಟಿ ರೂಪಾಯಿ ದೇಣಿಗೆ ಬಂದಿದೆ.
ಈ ದೇಣಿಗೆಯಲ್ಲಿ 4.53 ಕೋಟಿ ರೂಪಾಯಿ ಹಳೆಯ 500 ಮತ್ತು 1000ದ ನೋಟುಗಳಾಗಿದ್ದು, 2,000 ಮತ್ತು 500ರ 3.80 ಕೋಟಿ ರೂಪಾಯಿಗಳಿವೆ ಎಂದು ಸಾಯಿಬಾಬ ಸಂಸ್ಥಾನದ ಟ್ರಸ್ಟಿಗಳಲ್ಲೊಬ್ಬರಾದ ಸಚಿನ್ ತಂಬೆ ಹೇಳುತ್ತಾರೆ.
ಕಳೆದ 50 ದಿನಗಳಲ್ಲಿ ಸಂಸ್ಥಾನದ ದೇಣಿಗೆ ಬಾಕ್ಸ್ ನಲ್ಲಿ 18.96 ಕೋಟಿ ರೂಪಾಯಿ, ಡೆಬಿಟ್/ಕ್ರೆಡಿಟ್ ಕಾರ್ಡು ಮೂಲಕ 2.62 ಕೋಟಿ ರೂಪಾಯಿ, 3.96 ಕೋಟಿ ಮತ್ತು ಬ್ಯಾಂಕಿನ ಡಿಡಿ ಮೂಲಕ 1.46 ಕೋಟಿ ರೂಪಾಯಿ ಆನ್ ಲೈನ್ ನಲ್ಲಿ ಮತ್ತು 35 ಲಕ್ಷ ರೂಪಾಯಿ ಮನಿ ಆರ್ಡರ್ ಮೂಲಕ ಬಂದಿದೆ.
ನಗದು ದೇಣಿಗೆ ಹೊರತುಪಡಿಸಿ ದೇವಸ್ಥಾನದ ಟ್ರಸ್ಟ್ ಗೆ ಚಿನ್ನ 2.90 ಕೆಜಿ, ಬೆಳ್ಳಿ 56 ಕೆಜಿ ಬಂದಿದೆ. ವಿಐಪಿ ಭಕ್ತರಿಂದ 3.18 ಕೋಟಿ ರೂಪಾಯಿ ದರ್ಶನದ ಮೂಲಕ ಮತ್ತು ನವೆಂಬರ್ 8ರ ನಂತರ ಆರತಿಗೆ ಭಕ್ತರು ನೀಡಿದ ಹಣ ಬಂದಿದೆ ಎಂದು ತಂಬೆ ಹೇಳುತ್ತಾರೆ.
ಕಳೆದ ಹಣಕಾಸು ವರ್ಷದಲ್ಲಿ ಪ್ರಖ್ಯಾತ ಸಾಯಿಬಾಬಾ ದೇವಸ್ಥಾನಕ್ಕೆ 162 ಕೋಟಿ ರೂಪಾಯಿ ದೇಣಿಗೆ ಬಂದಿದ್ದು, ಅದು ದಿನಕ್ಕೆ ಸರಾಸರಿ 44.38 ಕೋಟಿಯಾಗಿದೆ.ಆದರೂ ನೋಟುಗಳ ಚಲಾವಣೆ ರದ್ಧತಿ ನಂತರ ಸಂಸ್ಥಾನ ಪ್ರತಿದಿನ ಸರಾಸರಿ 37.92 ಲಕ್ಷ ಸ್ವೀಕರಿಸಿದೆ ಎಂದು ತಂಬೆ ಹೇಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com