ತಕಂ ಪರಿಯೊ ಅರುಣಾಚಲ ಪ್ರದೇಶದ ನೂತನ ಮುಖ್ಯಮಂತ್ರಿ?

ಪಕ್ಷ ವಿರೋಧಿ ಆರೋಪದ ಮೇಲೆ ಅರುಣಾಚಲ ಪ್ರದೇಶ ಮುಖ್ಯಮಂತ್ರಿ ಪೆಮಾ ಖಂಡು ನಿಂದ ಅಮಾನತಾಗಿರುವ ಹಿನ್ನೆಲೆಯಲ್ಲಿ ಪೀಪಲ್ಸ್ ಪಾರ್ಟಿ ಪಕ್ಷದಿಂದ ಅರುಣಾಚಲ ಪ್ರದೇಶದ ನೂತನ ಮುಖ್ಯಮಂತ್ರಿಯಾಗಿ ಶಾಸಕ ತಕಂ ಪರಿಯೊ ಆಯ್ಕೆಯಾಗುವ ಸಾಧ್ಯತೆ ಇದೆ.
ತಕಂ ಪರಿಯೊ
ತಕಂ ಪರಿಯೊ
ಇಟಾನಗರ: ಪಕ್ಷ ವಿರೋಧಿ ಆರೋಪದ ಮೇಲೆ ಅರುಣಾಚಲ ಪ್ರದೇಶ ಮುಖ್ಯಮಂತ್ರಿ ಪೆಮಾ ಖಂಡು ನಿಂದ ಅಮಾನತಾಗಿರುವ ಹಿನ್ನೆಲೆಯಲ್ಲಿ ಪೀಪಲ್ಸ್ ಪಾರ್ಟಿ ಪಕ್ಷದಿಂದ ಅರುಣಾಚಲ ಪ್ರದೇಶದ ನೂತನ ಮುಖ್ಯಮಂತ್ರಿಯಾಗಿ ಶಾಸಕ ತಕಂ ಪರಿಯೊ ಆಯ್ಕೆಯಾಗುವ ಸಾಧ್ಯತೆ ಇದೆ. 
ಪೀಪಲ್ಸ್ ಪಾರ್ಟಿ ಪಕ್ಷಕ್ಕೆ ಹೊಸ ಶಾಸಕಾಂಗ ನಾಯಕನ ಆಯ್ಕೆಯಾಗಬೇಕಿದ್ದು, ಅತಿ ಶ್ರೀಮಂತ ಶಾಸಕನಾಗಿರುವ ತಕಂ ಪರಿಯೋ ಅವರನ್ನು ಶಾಸಕಾಂಗ ಪಕ್ಷದ ಮುಖ್ಯಸ್ಥ (ಮುಖ್ಯಮಂತ್ರಿ)ಯನ್ನಾಗಿ ಆಯ್ಕೆ ಮಾಡುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ. 
ಪಕ್ಷ ವಿರೋಧಿ ಆರೋಪದ ಮೇಲೆ ಅರುಣಾಚಲ ಪ್ರದೇಶ ಮುಖ್ಯಮಂತ್ರಿ ಪೆಮಾ ಖಂಡು ಸೇರಿದಂತೆ 7 ಶಾಸಕರನ್ನು ಪಕ್ಷದಿಂದ ಅಮಾನತು ಮಾಡಲು ಪೀಪಲ್ಸ್ ಪಾರ್ಟಿ ಪಕ್ಷದ ಅಧ್ಯಕ್ಷ ಖಫಾ ಬೆಂಗಿಯಾ ನಿರ್ಧಾರ ಕೈಗೊಂಡಿದ್ದಾರೆ. ಪೆಮಾ ಖಂಡು ಕಾಂಗ್ರೆಸ್ ನಿಂದ ಪಿಪಿಎ ಪಕ್ಷಕ್ಕೆ ಪಕ್ಷಾಂತರಗೊಂಡ ನಂತರ ನಬಮ್ ತುಕಿ ಅವರನ್ನು ಕೆಳಗಿಳಿಸಿ ಜುಲೈ 16 ರಂದು ಪೆಮಾ ಖಂಡು ಅವರನ್ನು ಸಿಎಂ ಆಗಿ ಆಯ್ಕೆ ಮಾಡಲಾಗಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com