ಅರುಣಾಚಲ: ಪಿಪಿಎನಿಂದ ಮತ್ತೆ ನಾಲ್ವರು ಶಾಸಕರ ಅಮಾನತು

ಅರುಣಾಚಲ ಪ್ರದೇಶದಲ್ಲಿ ಮತ್ತೆ ರಾಜಕೀಯ ಬಿಕ್ಕಟ್ಟು ಸೃಷ್ಟಿಯಾಗಿದ್ದು, ಅರುಣಾಚಲ ಪ್ರದೇಶ ಪೀಪಲ್ಸ್‌ ಪಾರ್ಟಿ(ಪಿಪಿಎ)ಯ ಮತ್ತೆ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಇಟಾನಗರ: ಅರುಣಾಚಲ ಪ್ರದೇಶದಲ್ಲಿ ಮತ್ತೆ ರಾಜಕೀಯ ಬಿಕ್ಕಟ್ಟು ಸೃಷ್ಟಿಯಾಗಿದ್ದು, ಅರುಣಾಚಲ ಪ್ರದೇಶ ಪೀಪಲ್ಸ್‌ ಪಾರ್ಟಿ(ಪಿಪಿಎ)ಯ ಮತ್ತೆ ನಾಲ್ವರು ಶಾಸಕರನ್ನು ಶನಿವಾರ ಪಕ್ಷದಿಂದ ಅಮಾನತುಗೊಳಿಸಲಾಗಿದೆ.
ಈ ಹಿಂದೆ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಆರೋಪದ ಮೇಲೆ ಪಿಪಿಎ ಮುಖ್ಯಮಂತ್ರಿ ಪೆಮಾ ಖಂಡು ಹಾಗೂ ಇತರ ಆರು ಶಾಸಕರನ್ನು ಶುಕ್ರವಾರ ಪಕ್ಷದಿಂದ ಅಮಾನತು ಮಾಡಲಾಗಿತ್ತು. ಇದೀಗ ಮತ್ತೆ ನಾಲ್ವರನ್ನು ಅಮಾನತು ಮಾಡಲಾಗಿದ್ದು, ಇದರೊಂದಿಗೆ ಒಟ್ಟು 11 ಶಾಸಕರನ್ನು ಅಮಾನತು ಮಾಡಿದಂತಾಗಿದೆ.
ಪಿಪಿಎ ಶಾಸಕರಾದ ಪಂಜಿ ಮರ, ಬಮಂಗ್ ಫೆಲಿಂಕ್ಸ್, ಪನೆಯ್ ತರಮ್ ಹಾಗೂ ಹೊಂಚುಂಗ್ ನಂದಮ್ ಅವರನ್ನು ಇಂದು ಅಮಾನತುಗೊಳಿಸಲಾಗಿದೆ.
ಪಕ್ಷದ ತೀರ್ಮಾನದ ವಿರುದ್ಧ ತಿರುಗಿ ಬಿದ್ದಿರುವ ಪೆಮಾ ಖಂಡು, ತಮ್ಮ ಸರ್ಕಾರಕ್ಕೆ ಬಹುಮತ ಇದ್ದು, 49 ಶಾಸಕರು ಬೆಂಬಲ ಸೂಚಿಸಿದ್ದಾರೆ ಎಂದಿದ್ದಾರೆ.
ಆಡಳಿತಾರೂಢ ಈಶಾನ್ಯ ಪ್ರಜಾಪ್ರಭುತ್ವ ರಂಗದ (ಎನ್‌ಇಡಿಎ) ಭಾಗವಾಗಿರುವ  ಬಿಜೆಪಿಯು ಖಂಡು ಅವರನ್ನು ಬೆಂಬಲಿಸಿದೆ. ಆದರೆ, ಪಿಪಿಎಯು ರಾಜ್ಯದ ನಾಯಕತ್ವ ಬದಲಾಗಲಿದೆ ಎಂದು ಬಲವಾಗಿ ಪ್ರತಿಪಾದಿಸಿದೆ.
ಸೆಪ್ಟೆಂಬರ್‌ನಲ್ಲಿ ಕಾಂಗ್ರೆಸ್‌ನಿಂದ ಪೆಮಾ ಖಂಡು ನೇತೃತ್ವದಲ್ಲಿ 40ಕ್ಕೂ ಹೆಚ್ಚು ಶಾಸಕರು ಪಕ್ಷಾಂತರಗೊಂಡು ಪಿಪಿಎ ಸೇರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com