ಭಾರತೀಯ ಸೇನೆ ಯಾವುದೇ ಸವಾಲುಗಳನ್ನು ಎದುರಿಸಲು ಸಿದ್ಧ: ನಿವೃತ್ತ ಜನರಲ್ ದಲಬೀರ್ ಸಿಂಗ್

ಭಾರತೀಯ ಸೇನೆ ಯಾವುದೇ ಕಠಿಣ ಸವಾಲುಗಳನ್ನು ಎದುರಿಸಲು ಸಿದ್ಧವಿದೆ ಎಂದು ನಿವೃತ್ತ ಸೇನಾ ಮುಖ್ಯಸ್ಥ ಜನರಲ್ ದಲ್ಬೀರ್ ಸಿಂಗ್...
ನಿವೃತ್ತಿ ಹೊಂದಿದ ದಲ್ಬೀರ್ ಸಿಂಗ್ ಸುಹಾಗ್
ನಿವೃತ್ತಿ ಹೊಂದಿದ ದಲ್ಬೀರ್ ಸಿಂಗ್ ಸುಹಾಗ್
Updated on

ನವದೆಹಲಿ: ಭಾರತೀಯ ಸೇನೆ ಯಾವುದೇ ಕಠಿಣ ಸವಾಲುಗಳನ್ನು ಎದುರಿಸಲು ಸಿದ್ಧವಿದೆ ಎಂದು ನಿವೃತ್ತ ಸೇನಾ ಮುಖ್ಯಸ್ಥ ಜನರಲ್ ದಲ್ಬೀರ್ ಸಿಂಗ್ ಸುಹಾಗ್ ಹೇಳಿದ್ದಾರೆ.

ಭಾರತೀಯ ಸೇನೆಯಲ್ಲಿ 43 ವರ್ಷಗಳ ತಮ್ಮ ಸುದೀರ್ಘ ಸೇವೆಯ ನಂತರ ಶನಿವಾರ ನಿವೃತ್ತಿ ಹೊಂದಿದ ದಲ್ಬೀರ್ ಸಿಂಗ್ ದೇಶಕ್ಕಾಗಿ ತಮ್ಮ ಅಮೂಲ್ಯ ಜೀವ ತ್ಯಾಗ ಮಾಡಿದ ಎಲ್ಲಾ ಹುತಾತ್ಮ ಯೋಧರಿಗೆ ವಂದನೆ ಸಲ್ಲಿಸಿದರು.

ಭಾರತೀಯ ಸೇನೆ ಸರ್ವಸನ್ನದ್ಧವಾಗಿದ್ದು, ಯಾವುದೇ ರೀತಿಯ ಕಠಿಣ ಸವಾಲುಗಳನ್ನು ಎದುರಿಸಲು ಸಿದ್ಧವಿದೆ ಎಂದ ಅವರು ಸರ್ಕಾರ ಒಆರ್ ಒಪಿ ಅನುಷ್ಠಾನಗೊಳಿಸಿದ್ದಕ್ಕೆ ಧನ್ಯವಾದ ತಿಳಿಸಿದರು.

ಈ ವರ್ಷ ಉಗ್ರರ ಒಳನುಸುಳುವಿಕೆ ಪ್ರಮಾಣ ಹೆಚ್ಚಿದ್ದು, ಕಳೆದ ವರ್ಷಕ್ಕಿಂತ ಎರಡು ಪಟ್ಟು ಹೆಚ್ಚಿನ ಪ್ರಮಾಣದಲ್ಲಿ ಭಯೋತ್ಪಾದಕರನ್ನು ಕೊಲ್ಲಲಾಗಿದೆ ಎಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com