ಎಟಿಎಂ ವಿತ್ ಡ್ರಾ ಮಿತಿ ರೂ 2,500 ರಿಂದ 4,500 ರೂ ಗಳಿಗೆ ಏರಿಕೆ: ಆರ್ ಬಿಐ

ನಿಷೇಧಗೊಂಡಿರುವ 500, 1000 ರೂ ನೋಟುಗಳನ್ನು ಬ್ಯಾಂಕ್ ಗಳಲ್ಲಿ ಜಮಾ ಮಾಡುವ ಅವಧಿ ಡಿ.30 ಕ್ಕೆ ಮುಕ್ತಾಯಗೊಂಡಿದ್ದು, ಕೇಂದ್ರ ಸರ್ಕಾರ ಎಟಿಎಂಗಳಲ್ಲಿ ವಿತ್ ಡ್ರಾ ಮಿತಿಯನ್ನು ಸಡಿಲಗೊಳಿಸಿದೆ.
ಎಟಿಎಂ ವಿತ್ ಡ್ರಾ ಮಿತಿ ರೂ 2,500 ರಿಂದ 4,500 ರೂ ಗಳಿಗೆ ಏರಿಕೆ: ಆರ್ ಬಿಐ
ಎಟಿಎಂ ವಿತ್ ಡ್ರಾ ಮಿತಿ ರೂ 2,500 ರಿಂದ 4,500 ರೂ ಗಳಿಗೆ ಏರಿಕೆ: ಆರ್ ಬಿಐ
ಮುಂಬೈ: ನಿಷೇಧಗೊಂಡಿರುವ 500, 1000 ರೂ ನೋಟುಗಳನ್ನು ಬ್ಯಾಂಕ್ ಗಳಲ್ಲಿ ಜಮಾ ಮಾಡುವ ಅವಧಿ ಡಿ.30 ಕ್ಕೆ ಮುಕ್ತಾಯಗೊಂಡಿದ್ದು, ಕೇಂದ್ರ ಸರ್ಕಾರ ಎಟಿಎಂಗಳಲ್ಲಿ ವಿತ್ ಡ್ರಾ ಮಿತಿಯನ್ನು ಸಡಿಲಗೊಳಿಸಿದೆ. 
ಕೇಂದ್ರ ಸರ್ಕಾರ ಈ ಹಿಂದಿದ್ದ 2,500 ರೂ ವಿತ್ ಡ್ರಾ ಮಿತಿಯನ್ನು 4,500 ರೂ ಕ್ಕೆ ಏರಿಕೆ ಮಾಡಿದ್ದು ಜ.1 ರಿಂದ ಜಾರಿಗೆ ಬರಲಿದೆ. ಈ ಮೂಲಕ ಕೇಂದ್ರ ಸರ್ಕಾರ ದೇಶದ ಜನತೆಗೆ ಹೊಸ ವರ್ಷದ ಗಿಫ್ಟ್ ನೀಡಿದೆ. 
ನೋಟು ನಿಷೇಧದ ನಂತರದ ಪರಿಸ್ಥಿತಿಯನ್ನು ಅವಲೋಕಿಸಲಾಗಿದ್ದು ಎಟಿಎಂ ಗಳ ಮೂಲಕ ವಿತ್ ಡ್ರಾ ಮಾಡುವ ಮಿತಿಯನ್ನು 4,500 ರೂಗಳಿಗೆ ಏರಿಕೆ ಮಾಡಲಾಗಿದ್ದು ಜ.1 ರಿಂದ ಜಾರಿಗೆ ಬರಲಿದೆ ಎಂದು ಆರ್ ಬಿಐ ಅಧಿಕೃತ ಘೋಷಣೆ ಮಾಡಿದೆ. 
ವಿತ್ ಡ್ರಾ ಮಿತಿಯನ್ನು ಸಡಿಲಗೊಳಿಸಲಾಗಿದೆಯಾದರೂ ವಾರದ ವಿತ್ ಡ್ರಾ ಮಿತಿಯಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲಾಗಿದ್ದು, 24,000 ರೂ ಗಳ ಮಿತಿ ಮುಂದುವರೆಯಲಿದೆ ಎಂದು ಆರ್ ಬಿ ಐ ತಿಳಿಸಿದೆ. ಡಿ.21 ರಂದು ಆರ್ ಬಿಐ ಬಿಡುಗಡೆ ಮಾಡಿರುವ ಮಾಹಿತಿಯ ಪ್ರಕಾರ ಡಿ.19 ರ ವರೆಗೂ 5.29 ಲಕ್ಷ ಕೋಟಿ ರೂ ಮೊತ್ತವನ್ನು ಎಟಿಎಂ, ಬ್ಯಾಂಕ್ ಗಳಿಗೆ ಕಳಿಸಿಕೊಡಲಾಗಿದೆ ಎಂದು ತಿಳಿದುಬಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com