ಅಗತ್ಯವಿದ್ದರೆ ಶಕ್ತಿ ತೋರಿಸಲು ಭಾರತೀಯ ಸೇನೆ ಹಿಂಜರಿಯುವುದಿಲ್ಲ: ಜ| ಬಿಪಿನ್ ರಾವತ್

ಭಾರತೀಯ ಸೇನೆ ಗಡಿಭಾಗದಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಬಯಸುವುದಾದರೂ ಕೂಡ...
ಜನರಲ್ ಬಿಪಿನ್ ರಾವತ್
ಜನರಲ್ ಬಿಪಿನ್ ರಾವತ್
ನವದೆಹಲಿ:  ಭಾರತೀಯ ಸೇನೆ ಗಡಿಭಾಗದಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಬಯಸುವುದಾದರೂ ಕೂಡ ಅಗತ್ಯಬಿದ್ದರೆ ತನ್ನ ಸ್ನಾಯುಬಲವನ್ನು ತೋರಿಸಲು ಸಿದ್ಧ ಎಂದು ಸೇನೆಯ ನೂತನ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹೇಳಿದ್ದಾರೆ.
ಪೂರ್ವ ಸೇನಾ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಪ್ರವೀಣ್ ಬಕ್ಷಿ ಮತ್ತು ದಕ್ಷಿಣ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಪಿ.ಎಮ್. ಹರೀಝ್ ಸೇನೆಯಲ್ಲಿ ಸೇವೆ ಮುಂದುವರಿಸಲಿದ್ದು ಏಕತೆಯನ್ನು ಕಾಪಾಡಲಿದ್ದಾರೆ ಎಂದರು.
ಸೇನಾಪಡೆ ಗಡಿಭಾಗದಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಬಯಸುತ್ತದೆ, ಆದರೆ ಯುದ್ಧ ಮಾಡಬೇಕಾದ ಅನಿವಾರ್ಯತೆ ಬಂದಲ್ಲಿ ತನ್ನ ಶಕ್ತಿ ತೋರಿಸಲು ಸಿದ್ಧವಿದೆ ಎಂದು ಜನರಲ್ ರಾವತ್ ಹೇಳಿದರು.
ಸೇನೆಯ ಎಲ್ಲಾ ಸೇವಾ ವಿಭಾಗಗಳು ಮತ್ತು ಘಟಕಗಳು ಒಂದಾಗಿ ಕೆಲಸ ಮಾಡುವುದನ್ನು ನೋಡಲು ತಾವು ಬಯಸುವುದಾಗಿ ಅವರು ನುಡಿದರು.
27ನೇ ಸೇನಾ ಮುಖ್ಯಸ್ಥರಾಗಿ ನಿನ್ನೆ ಅಧಿಕಾರ ವಹಿಸಿಕೊಂಡ ಜನರಲ್ ಬಿಪಿನ್ ರಾವತ್ ದೆಹಲಿಯ ದಕ್ಷಿಣ ವಲಯದ ಗೌರವ  ಸ್ವೀಕರಿಸಿ ಮಾತನಾಡಿದರು.
ಪ್ರಸ್ತುತ ಸೃಷ್ಟಿಯಾಗುತ್ತಿರುವ ಸವಾಲುಗಳನ್ನು ಎದುರಿಸಲು, ಉತ್ತರ ಭಾಗದಲ್ಲಿ ಮಿಲಿಟರಿ ಪಡೆಗಳ ಪುನರ್ ಸಂಘಟನೆ ಮತ್ತು ಪುನರ್ ಸೃಷ್ಟಿಗೆ, ಭಯೋತ್ಪಾದನೆ ನಿಗ್ರಹ ವಿಷಯವನ್ನು ಸಂಭಾಳಿಸಲು, ಪಾಶ್ಚಾತ್ಯ ದೇಶಗಳ  ಸಂಭಾವ್ಯ ಯುದ್ಧವನ್ನು ಎದುರಿಸಲು, ಈಶಾನ್ಯ ಭಾಗದ ಪರಿಸ್ಥಿತಿಯನ್ನು ನಿಯಂತ್ರಿಸಲು ರಾವತ್ ಸೇನಾ ಮುಖ್ಯಸ್ಥರ ಹುದ್ದೆಗೆ ಅರ್ಹರು ಎಂದು ಸರ್ಕಾರ ನಿರ್ಧರಿಸಿತು ಎಂದು ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com