ಜಾರ್ಖಂಡ್ ಕಲ್ಲಿದ್ದಲು ಗಣಿ ಕುಸಿತ: ಮೃತರ ಸಂಖ್ಯೆ 17ಕ್ಕೆ ಏರಿಕೆ

ಜಾರ್ಖಂಡ್ ನ ರಾಂಚಿಯ ಗೊದ್ದಾ ಜಿಲ್ಲೆಯ ಈಸ್ಟರ್ನ್ ಕೋಲ್ ಫೀಲ್ಡ್ ಲಿಮಿಟೆಡ್ ನ ಲಾಲ್ ಮಾಟಿಯಾ ಗಣಿಯ ಪ್ರವೇಶ ಕೇಂದ್ರದಲ್ಲಿ ಸಂಭವಿಸಿದ ಕುಸಿತದಲ್ಲಿ ಮೃತರ...
ಕಲ್ಲಿದ್ದಲು ಗಣಿ
ಕಲ್ಲಿದ್ದಲು ಗಣಿ

ರಾಂಚಿ: ಜಾರ್ಖಂಡ್ ನ ರಾಂಚಿಯ ಗೊದ್ದಾ ಜಿಲ್ಲೆಯ ಈಸ್ಟರ್ನ್ ಕೋಲ್ ಫೀಲ್ಡ್ ಲಿಮಿಟೆಡ್ ನ ಲಾಲ್ ಮಾಟಿಯಾ ಗಣಿಯ ಪ್ರವೇಶ ಕೇಂದ್ರದಲ್ಲಿ ಸಂಭವಿಸಿದ ಕುಸಿತದಲ್ಲಿ ಮೃತರ ಸಂಖ್ಯೆ 17ಕ್ಕೆ ಏರಿಕೆ ಆಗಿದೆ.

ಕಲ್ಲಿದ್ದಲು ಗಣಿ ಕುಸಿದದಲ್ಲಿ ಸುಮಾರು 50 ಜನ ಕಾರ್ಮಿಕರು ಸಿಲುಕಿದ್ದು ರಕ್ಷಣಾ ಪರಿಹಾರ ಕಾರ್ಯ ಭರದಿಂದ ಸಾಗಿದೆ. ದುರ್ಘಟನೆಯಲ್ಲಿ ಮೃತಪಟ್ಟ 17 ಮೃತದೇಹಗಳನ್ನು ಇಲ್ಲಿಯವರೆಗೂ ಹೊರತೆಗೆಯಲಾಗಿದೆ. ಇನ್ನುಳಿದವರಿಗಾಗಿ ಶೋಧ ಕಾರ್ಯ ಮುಂದುವರೆದಿದೆ.

ಗಣಿಯ ಅವಶೇಷಗಳಡಿ ಎಷ್ಟು ಜನ ಮತ್ತು ವಾಹನಗಳು ಸಿಕ್ಕಿ ಹಾಕಿಕೊಂಡಿದ್ದಾರೆ ಎಂಬ ಬಗ್ಗೆ ಇದುವರೆಗೆ ಗೊತ್ತಾಗಿಲ್ಲ, ರಕ್ಷಣಾ ಕಾರ್ಯ ಮುಗಿದ ಮೇಲೆ ಗೊತ್ತಾಗಲಿದೆ ಎಂದು ಗೊಡ್ಡ ಪೊಲೀಸ್ ಸೂಪರಿಂಟೆಂಡೆಂಟ್ ಹರಿಲಾಲ್ ಚೌಹಾನ್ ತಿಳಿಸಿದ್ದಾರೆ.

ಮಣ್ಣಿನ ರಾಶಿಯ ಮೇಲೆ ಬಿರುಕು ಮೂಡಿದ್ದು ಅದು ಕುಸಿದು ಬಿದ್ದು ಗಣಿಯ ಪ್ರವೇಶ ಕೇಂದ್ರ ಸಂಪೂರ್ಣ ಬಂದ್ ಆಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ನೆಲದಿಂದ ಸುಮಾರು 200 ಅಡಿ ಕೆಳಗೆ ಕಲ್ಲಿದ್ದಲು ಗಣಿಗಾರಿಕೆ ನಡೆಯುತ್ತಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com