ಎನ್ಎಸ್ ಜಿ ವೆಬ್ ಸೈಟ್ ಹ್ಯಾಕ್: ಪ್ರಧಾನ ಮಂತ್ರಿ ವಿರುದ್ಧ ದೂಷಣೆ ಸಂದೇಶಗಳು

ಶಂಕಿತ ಪಾಕಿಸ್ತಾನ ಸಂಯೋಜಿತ ನಿರ್ವಾಹಕರು ಭಾನುವಾರ ರಾಷ್ಟ್ರೀಯ ಭದ್ರತಾ ಪಡೆಯ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಶಂಕಿತ ಪಾಕಿಸ್ತಾನ ಸಂಯೋಜಿತ ನಿರ್ವಾಹಕರು ಭಾನುವಾರ ರಾಷ್ಟ್ರೀಯ ಭದ್ರತಾ ಪಡೆಯ ಅಧಿಕೃತ ವೆಬ್ ಸೈಟ್ ನ್ನು ಹ್ಯಾಕ್ ಮಾಡಿದ್ದು ಪ್ರಧಾನ ಮಂತ್ರಿ ಮತ್ತು ಭಾರತದ ವಿರುದ್ಧವಾದ ದೂಷಣೆ ಹೊತ್ತ ಸಂದೇಶಗಳನ್ನು ಪೋಸ್ಟ್ ಮಾಡಲಾಗಿದೆ.
ಹ್ಯಾಕಿಂಗ್ ಮಾಡಲು ನಡೆಸಿದ ಪ್ರಯತ್ನಗಳು ಇಂದು ಬೆಳಗ್ಗೆಯೇ ಬೆಳಕಿಗೆ ಬಂದಿತ್ತು. URL-www.nsg.gov.in ವೆಬ್ ಸೈಟ್ ನ್ನು ಭ್ರಷ್ಟಾಚಾರ ನಿಗ್ರಹ ಪಡೆಯ ಕೇಂದ್ರ ಕಚೇರಿಯಲ್ಲಿ ಕೂಡಲೇ ಬ್ಲಾಕ್ ಮಾಡಲಾಯಿತು.
ಎಲೋನ್ ಇಂಜೆಕ್ಟರ್ ಎಂದು ತಮ್ಮನ್ನು ಗುರುತಿಸಿಕೊಂಡಿರುವ ಹ್ಯಾಕರ್ ಗಳು ಸೈಟ್ ನ ಮುಖಪುಟದಲ್ಲಿ ಅವಮಾನಕಾರಿ ಸಂದೇಶಗಳನ್ನು ಪೋಸ್ಟ್ ಮಾಡಿದ್ದಾರೆ.
ಪಾಕಿಸ್ತಾನ ಮೂಲದ ಹ್ಯಾಕರ್ ಗಳು ಹ್ಯಾಕ್ ಮಾಡಲು ಪ್ರಯತ್ನಿಸಿರಬಹುದು ಎಂದು ಅಧಿಕೃತ ಮೂಲಗಳು ತಿಳಿಸಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.
ಬ್ಲಾಕ್ ಕ್ಯಾಟ್ ಕಮಾಂಡೊಗಳಿಗೆ ಸೇರಿದ ವೆಬ್ ಸೈಟ್ ನ್ನು ರಾಷ್ಟ್ರೀಯ ಭದ್ರತಾ ಪಡೆ ಕೇಂದ್ರ ಕಚೇರಿಯಲ್ಲಿ ನಿರ್ವಹಿಸಲಾಗುತ್ತಿತ್ತು. ಭದ್ರತಾ ಪಡೆಯ ಮೂಲಭೂತ ಮಾಹಿತಿ, ಅದರ ಹುಟ್ಟು ಮತ್ತು ಕಾರ್ಯನಿರ್ವಹಣೆ ಕುರಿತು ವೆಬ್ ಸೈಟ್ ನಲ್ಲಿ ಮಾಹಿತಿ ಸಿಗುತ್ತದೆ. ಈ ವಿಷಯವನ್ನು ರಾಷ್ಟ್ರೀಯ ಮಾಹಿತಿ ಕೇಂದ್ರದ ಗಮನಕ್ಕೆ ತರಲಾಗಿದ್ದು ಪರಿಹಾರ ಕಾರ್ಯ ನಡೆಯುತ್ತಿದೆ.
ಗಣ್ಯ ಕಮಾಂಡೊ ಪಡೆಯನ್ನು 1984ರಲ್ಲಿ ಭಯೋತ್ಪಾದನೆ ನಿಗ್ರಹ ಮತ್ತು ಕಡಲ್ಗಳ್ಳರ ಕಾರ್ಯಾಚರಣೆಗೆ ಕೈಗೊಳ್ಳಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com