ಮುಗಿಯದ ಎಸ್‌ಪಿ ಹೈಡ್ರಾಮಾ: ಮತ್ತೆ ಪಕ್ಷದಿಂದ ರಾಮಗೋಪಾಲ್ ಯಾದವ್ ಉಚ್ಛಾಟನೆ
ಲಖನೌ: ಅನುಮತಿ ಇಲ್ಲದೆ ಪಕ್ಷದ ಕಾರ್ಯಕಾರಣಿ ಸಭೆ ಕರೆದಿದ್ದ ರಾಮಗೋಪಾಲ್ ಯಾದವ್ ಅವರನ್ನು ಸಮಾಜವಾದಿ ಪಕ್ಷದ ರಾಷ್ಟ್ರಾಧ್ಯಕ್ಷ ಮುಲಾಯಂ ಸಿಂಗ್ ಯಾದವ್ ಮತ್ತೆ ಪಕ್ಷದಿಂದ ಉಚ್ಛಾಟಿಸಿದ್ದಾರೆ.
ಅನುಮತಿ ಇಲ್ಲದೆ ಇಂದು ಪಕ್ಷದ ಕಾರ್ಯಕಾರಿಣಿ ಸಭೆ ನಡೆದಿದ್ದು ಅದು ಅಸಂವಿಧಾನಿಕವಾಗಿದ್ದು ಹೇಳಿರುವ ಮುಲಾಯಂ ಸಿಂಗ್ ಯಾದವ್ ರಾಮಗೋಪಾಲ್ ಯಾದವ್ ಅವರನ್ನು ಪಕ್ಷದಿಂದ ಉಚ್ಚಾಟಿಸಿದ್ದಾರೆ. ಅಲ್ಲದೆ ಜನವರಿ 5ರಂದು ಲಖನೌನ ಜನೇಶ್ವರ ಮಿಶ್ರ ಪಾಕ್ ನಲ್ಲಿ ಅಧಿವೇಶನ ಕರೆದಿರುವುದಾಗಿ ಪತ್ರದ ಮೂಲಕ ಆದೇಶವನ್ನು ಮುಲಾಯಂ ಸಿಂಗ್ ಮಾಡಿದ್ದಾರೆ.
ಇಂದು ಲಖನೌನಲ್ಲಿ ನಡೆದ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಸಮಾಜವಾದಿ ಪಕ್ಷದ ರಾಷ್ಟಾಧ್ಯಕ್ಷ ಮುಲಾಯಂ ಸಿಂಗ್ ಯಾದವ್ ರನ್ನು ಕೆಳಗಿಳಿಸಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿತ್ತು ಅಲ್ಲದೆ ಮುಲಾಯಂ ಸಿಂಗ್ ಇನ್ನು ಮುಂದೆ ಪಕ್ಷದ ಮಾರ್ಗದರ್ಶಕರಾಗಿ ಮಾತ್ರ ಕಾರ್ಯನಿರ್ವಹಿಸಲಿದ್ದಾರೆ ಎಂದು ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿತ್ತು. ಇದೇ ವೇಳೆ ಸಮಾಜವಾದಿ ಪಕ್ಷದ ರಾಜ್ಯಾಧ್ಯಕ್ಷರಾಗಿದ್ದ ಶಿವಪಾಲ್ ಯಾದವ್ ಮತ್ತು ಅಮರ್ ಸಿಂಗ್ ರನ್ನು ಪಕ್ಷದಿಂದ ವಜಾ ಮಾಡಿತ್ತು.
ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಆರೋಪದ ಮೇಲೆ ಇತ್ತೀಚೆಗಷ್ಟೇ ರಾಮಗೋಪಾಲ್ ಯಾದವ್ ಮತ್ತು ಮುಖ್ಯಮಂತ್ರಿ ಅಖಿಲೇಶ್ ಯಾದವ್ ರನ್ನು ಪಕ್ಷದಿಂದ ಉಚ್ಚಾಟಿಸಲಾಗಿತ್ತು. ಬಳಿಕ ಅಖಿಲೇಶ್ ಯಾದವ್ ಗೆ ಸಿಕ್ಕ ಬೆಂಬಲವನ್ನು ಕಂಡು ಮುಲಾಯಂ ತಮ್ಮ ಉಚ್ಚಾಟನೆ ನಿರ್ಣಯವನ್ನು ಹಿಂದಕ್ಕೆ ಪಡೆದಿದ್ದರು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ