ರೇಪ್ ಅಪರಾಧಿಗಳಿಗೆ ರಜೆ ರದ್ದುಗೊಳಿಸಲು ಕಾನೂನಿಗೆ ತಿದ್ದುಪಡಿ ತಂದ 'ಮಹಾ'ಸರ್ಕಾರ

ಜೈಲು ಶಿಕ್ಷೆ ಅನುಭವಿಸುತ್ತಿರುವ ಅತ್ಯಾಚಾರ ಅಪರಾಧಿಗಳಿಗೆ ನೀಡಲಾಗುವ ರಜೆಯನ್ನು ರದ್ದುಗೊಳಿಸಲು ಮಹಾರಾಷ್ಟ್ರ ಸರ್ಕಾರ ಮಾದರಿ ಕ್ರಮ ಕೈಗೊಂಡಿದ್ದು, ಕಾರಾಗೃಹ ಕೈಪಿಡಿಗೆ 30 ತಿದ್ದುಪಡಿ ತಂದಿದೆ.
ರೇಪ್ ಅಪರಾಧಿಗಳಿಗೆ ರಜೆ ರದ್ದುಗೊಳಿಸಲು ಕಾನೂನಿಗೆ ತಿದ್ದುಪಡಿ
ರೇಪ್ ಅಪರಾಧಿಗಳಿಗೆ ರಜೆ ರದ್ದುಗೊಳಿಸಲು ಕಾನೂನಿಗೆ ತಿದ್ದುಪಡಿ

ಮುಂಬೈ: ಜೈಲು ಶಿಕ್ಷೆ ಅನುಭವಿಸುತ್ತಿರುವ ಅತ್ಯಾಚಾರ ಅಪರಾಧಿಗಳಿಗೆ ನೀಡಲಾಗುವ ರಜೆಯನ್ನು ರದ್ದುಗೊಳಿಸಲು ಮಹಾರಾಷ್ಟ್ರ ಸರ್ಕಾರ ಮಾದರಿ ಕ್ರಮ ಕೈಗೊಂಡಿದ್ದು,  ಕಾರಾಗೃಹ ಕೈಪಿಡಿಗೆ 30 ತಿದ್ದುಪಡಿ ತಂದಿದೆ.  ಭಾರತದಲ್ಲಿ ಇಂಥದ್ದೊಂದು ದಿಟ್ಟ ಕ್ರಮ ಕೈಗೊಂಡ ಮೊದಲ ರಾಜ್ಯ ಮಹಾರಾಷ್ಟ್ರವಾಗಿದ್ದು ತಿದ್ದುಪಡಿ ಅಂಶಗಳ ಜಾರಿಗೆ ಚಾಲನೆ ನೀಡಲಾಗಿದೆ.
ಮಹಾರಾಷ್ಟ್ರ ಸರ್ಕಾರ ತಿದ್ದುಪಡಿ ತಂದಿರುವುದರಿಂದ ಜೈಲು ಶಿಕ್ಷೆಗೊಳಗಾಗಿರುವ ಅತ್ಯಾಚಾರಿಗಳು ಪೆರೋಲ್ ಪಡೆಯಲು ಮಾತ್ರ ಅರ್ಹರಾಗಿರುತ್ತಾರೆ. ಆದರೆ ಈ ಹಿಂದೆ ನೀಡಲಾಗುತ್ತಿದ್ದ ರಜೆಯನ್ನು ರದ್ದುಗೊಳಿಸಲಾಗಿದೆ ಎಂದು ಗೃಹ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಾಮಾಜಿಕ ಕಾರ್ಯಕರ್ತರಿಂದಲೂ ಮಹಾರಾಷ್ಟ್ರ ಸರ್ಕಾರದ ಕ್ರಮಕ್ಕೆ ಬೆಂಬಲ ವ್ಯಕ್ತವಾಗಿದ್ದು, ತಿದ್ದುಪಡಿ ಅಂಶ ಕಟ್ಟುನಿಟ್ಟಾಗಿ ಜಾರಿಯಾಗಬೇಕೆಂದು ಆಗ್ರಹಿಸಿದ್ದಾರೆ. ಇತರ ಅಪರಾಧಿಗಳ ರಜೆಯ ನಿಯಮಾವಳಿಗಳಿಗೂ ಕೆಲವೊಂದು ತಿದ್ದುಪಡಿ ತಂದಿರುವ ಮಹಾರಾಷ್ಟ್ರ ಸರ್ಕಾರ, 10 ವರ್ಷಕ್ಕಿಂತ ಕಡಿಮೆ ಅವಧಿಯ ಜೈಲು ಶಿಕ್ಷೆಗೆ ಗುರಿಯಾಗಿರುವ ಅಪರಾಧಿಗಳಿಗೆ 21 ದಿನಗಳ ರಜೆ (ಫರ್ಲಾಫ್) ಹಾಗೂ 7 ದಿನಗಳ ವಿಸ್ತರಣೆ ದೊರೆಯಲಿದೆ. 10 ವರ್ಷಕ್ಕಿಂತ ಹೆಚ್ಚು ಅವಧಿಯ ಜೈಲು ಶಿಕ್ಷೆಗೆ ಗುರಿಯಾದವರಿಗೆ  28 ದಿನಗಳ ರಜೆ ಸಿಗಲಿದೆ ಎಂದು ಬಂಧಿಕಾನೆ ವಿಭಾಗದ ಐಜಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com