ಕೇಜ್ರಿವಾಲ್ ಗೆ ಹಿನ್ನಡೆ: ಖಾಸಗಿ ಶಾಲೆ ನರ್ಸರಿ ಮ್ಯಾನೇಜ್ ಮೆಂಟ್ ಕೋಟಾ ರದ್ದಿಗೆ ದೆಹಲಿ ಹೈಕೋರ್ಟ್ ತಡೆ

ದೆಹಲಿಯ ಖಾಸಗಿ ನರ್ಸರಿ ಶಾಲೆಗಳಲ್ಲಿ ಪ್ರವೇಶಕ್ಕೆ ಮ್ಯಾನೇಜ್ ಮೆಂಟ್ ಕೋಟಾ ರದ್ದು ಪಡಿಸಿ ಆಮ್ ಆದ್ಮಿ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ದೆಹಲಿ ಹೈಕೋರ್ಟ್..
ದೆಹಲಿ ಹೈಕೋರ್ಟ್
ದೆಹಲಿ ಹೈಕೋರ್ಟ್

ನವದೆಹಲಿ: ದೆಹಲಿಯ ಖಾಸಗಿ ನರ್ಸರಿ ಶಾಲೆಗಳಲ್ಲಿ ಪ್ರವೇಶಕ್ಕೆ ಮ್ಯಾನೇಜ್ ಮೆಂಟ್ ಕೋಟಾ ರದ್ದು ಪಡಿಸಿ ಆಮ್ ಆದ್ಮಿ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ದೆಹಲಿ ಹೈಕೋರ್ಟ್ ತಡೆ ನೀಡಿರುವುದರಿಂದ ಸಿಎಂ ಕೇಜ್ರಿವಾಲ್ ಗೆ ಮುಖ ಭಂಗವಾಗಿದೆ.

ನರ್ಸರಿ ಶಾಲೆಗಳ ಪ್ರವೇಶಕ್ಕೆ ಸಂಬಂಧಿಸಿದಂತೆ ಮ್ಯಾನೇಜ್‌ಮೆಂಟ್‌ ಕೋಟಾ ಸಹಿತವಾಗಿ ಎಲ್ಲ 62 ಅರ್ಹತೆಗಳನ್ನು ರದ್ದು ಪಡಿಸಿ ಜನವರಿ 6ರಂದು ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಸರ್ಕಾರ ಆದೇಶ ಹೊರಡಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಖಾಸಗಿ ಶಾಲೆಗಳು ಹೈಕೋರ್ಟಿಗೆ ಸಲ್ಲಿಸಿದ್ದ ಅರ್ಜಿಯ ಮೇಲಿನ ತೀರ್ಪನ್ನು ದೆಹಲಿ ಹೈಕೋರ್ಟ್‌ ಮಂಗಳವಾರ ಕಾದಿರಿಸಿತ್ತು.

ಮ್ಯಾನೇಜ್ ಮೆಂಟ್ ಕೋಟಾವನ್ನು ರದ್ದು ಪಡಿಸುವ ಅಧಿಕಾರ ಆಮ್‌ ಆದ್ಮಿ ಸರಕಾರಕ್ಕೆ ಇಲ್ಲವೆಂದು ಕೋರ್ಟ್‌ ಹೇಳಿದೆ. ಖಾಸಗಿ ಶಾಲೆಗಳಲ್ಲಿ ಪ್ರವೇಶಾತಿಯ ಸಂದರ್ಭದಲ್ಲಿ ಪೋಷಕರಿಂದ ಲಂಚ ತೆಗೆದುಕೊಳ್ಳಲಾಗುತ್ತಿರುವ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಹೈಕೋರ್ಟ್‌ ಆಪ್‌ ಸರ್ಕಾರಕ್ಕೆ ಸೂಚಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com