ರೆಡ್ ರೋಡ್ ಕೇಸ್: ಮಾಜಿ ಶಾಸಕ ಎಂಡಿ ಸೊಹ್ರಬ್, ಆತನ ಪುತ್ರನಿಗೆ ನೋಟೀಸ್

ರೆಡ್ ರೋಡ್ ನಲ್ಲಿ ವಾಯುಪಡೆ ಅಧಿಕಾರಿಯನ್ನು ಬಲಿ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್ ಜೆಡಿಯ ಮಾಜಿ...
ಅಪಘಾತದಲ್ಲಿ ಜಖಂಗೊಂಡ ಕಾರು
ಅಪಘಾತದಲ್ಲಿ ಜಖಂಗೊಂಡ ಕಾರು
ಕೋಲ್ಕತ್ತ (ಪಿಟಿಐ): ರೆಡ್ ರೋಡ್ ನಲ್ಲಿ ವಾಯುಪಡೆ ಅಧಿಕಾರಿಯನ್ನು ಬಲಿ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್ ಜೆಡಿಯ ಮಾಜಿ ಶಾಸಕ ಮೊಹಮ್ಮದ್ ಸೊಹ್ರಬ್ ಮತ್ತು ಅವರ ಮಗನಿಗೆ ಪೊಲೀಸರು ನೋಟೀಸ್ ನೀಡಿದ್ದಾರೆ. 
ಇಲ್ಲಿನ ರೆಡ್‌ರೋಡ್‌ನಲ್ಲಿ ಬೆಳಗ್ಗೆ 6.30ಕ್ಕೆ ಗಣರಾಜ್ಯೋತ್ಸವ ಕವಾಯತು ಅಭ್ಯಾಸದ ವೇಳೆ ಸೊಹ್ರಬ್ ಅವರ ಪುತ್ರನ ಐಷಾರಾಮಿ 21 ವರ್ಷದ ಅಭಿಮನ್ಯು ಗೌಡ್, ‘ಔಡಿ’ ಬಿಳಿ ಕಾರು ವೇಗವಾಗಿ ಬಂದು ಮೂರು ಅಡೆತಡೆಗಳನ್ನು ಮುರಿದು, ತರಬೇತಿ ನೀಡುತ್ತಿದ್ದ ಅಧಿಕಾರಿಗೆ ಡಿಕ್ಕಿ ಹೊಡೆಯಿತು. ತೀವ್ರ ಗಾಯಗೊಂಡಿದ್ದ ಅಧಿಕಾರಿಯನ್ನು ಈಸ್ಟರ್ನ್ ಕಮಾಂಡ್ ಆಸ್ಪತ್ರೆಗೆ ದಾಖಲಿಸಿದರೂ ಅವರು ಬದುಕುಳಿಯಲಿಲ್ಲ. ಪ್ರಕರಣ ಸಂಬಂಧ ಈಗಾಗಲೇ ಇಬ್ಬರು ಆರೋಪಿಗಳನ್ನು ಬಂಧಿಸಿಲಾಗಿದೆ. ಅಪಘಾತ ಬಳಿಕ ಸೊಹ್ರಬ್ ಪುತ್ರ ತಲೆಮರೆಸಿಕೊಂಡಿದ್ದಾರೆ. 
ಆರೋಪಿಗಳ ವಿರುದ್ಧ ಸಿಟಿ ನ್ಯಾಯಾಲಯ ಲುಕ್ ಔಟ್ ನೋಟೀಸ್ ಜಾರಿ ಮಾಡಿತ್ತು. ಕೋಲ್ಕತಾ ಪೊಲೀಸರು ಸೊಹ್ರಬ್ ಅವರ ಮನೆಗೆ ತೆರಳಿ ನೋಟೀಸ್ ನೀಡಿ ಬಂದಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆರೋಪಿಗಳಾದ ಸೋನು ಅಲಿಯಾಸ್ ಶಾನವಾಜ್ ಖಾನ್ ಮತ್ತು ಜಾನಿ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 120 (ಬಿ) (ವಂಚನೆ), 302 (ಕೊಲೆ), 201 (ಸಾಕ್ಷ ಕಣ್ಮರೆಗೆ ಕಾರಣವಾಗುತ್ತದೆ), 212 (ಅಪರಾಧಿಗೆ ಆಶ್ರಯ) ಮತ್ತು 427 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com