ನೇತಾಜಿ ಖಜಾನೆ ಲೂಟಿ ಮಾಡಿದ್ದವರಿಗೆ ಪ್ರಶಸ್ತಿ ನೀಡಿದ್ದರು ನೆಹರು!

ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಐಎನ್ ಎ ಖಜಾನೆಯನ್ನು ಲೂಟಿ ಮಾಡಲಾಗಿತ್ತು ಎಂಬುದರ ಬಗ್ಗೆ, ಇತ್ತೀಚೆಗೆ ಬಿಡುಗಡೆ ಮಾಡಲಾದ ನೇತಾಜಿ ಕುರಿತ ಕಡತಗಳಲ್ಲಿ ..
ಸುಭಾಷ್ ಚಂದ್ರ ಬೋಸ್
ಸುಭಾಷ್ ಚಂದ್ರ ಬೋಸ್
Updated on

ನವದೆಹಲಿ: ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಐಎನ್ ಎ ಖಜಾನೆಯನ್ನು ಲೂಟಿ ಮಾಡಲಾಗಿತ್ತು ಎಂಬುದರ ಬಗ್ಗೆ, ಇತ್ತೀಚೆಗೆ ಬಿಡುಗಡೆ ಮಾಡಲಾದ ನೇತಾಜಿ ಕುರಿತ ಕಡತಗಳಲ್ಲಿ ಪುರಾವೆ ಸಿಕ್ಕಿವೆ ಎಂದು ತಿಳಿದು ಬಂದಿದೆ.

1951- ಹಾಗೂ 1955ರ ಅವಧಿಯಲ್ಲಿ ಟೋಕಿಯೋ ಹಾಗೂ ನವದೆಹಲಿ ನಡುವೆ ನಡೆದ ಪತ್ರ ವ್ಯವಹಾರದಿಂದ ಈ ಮಾಹಿತಿ ಬಹಿರಂಗವಾಗಿದ್ದು, ಖಜಾನೆ ಲೂಟಿ ಪ್ರಕರಣ ನೆಹರೂ ಸರ್ಕಾರದ ಗಮನಕ್ಕೆ ಬಂದಿತ್ತು. ಆದರೂ ನೆಹರೂ ಜಾಣ ಕುರುಡು ಪ್ರದರ್ಶಿಸಿದ್ದರು ಎನ್ನವಾಗಿದೆ.

ಖಜಾನೆ ಲೂಟಿ ಪ್ರಕರಣ ಸಂಬಂಧ ನೇತಾಜಿ ಸಹಚರರ ಮೇಲೆ  ಅನುಮಾನ ಪಡಲಾಗಿತ್ತು. ಇವರಲ್ಲಿ ಒಬ್ಬರನ್ನು ಪಂಚವಾರ್ಷಿಕ ಯೋಜನೆಯ ಪ್ರಚಾರ ಸಲಹೆಗಾರರಾಗಿ ನೇಮಕ ಮಾಡಲಾಗಿತ್ತು. ಸುಮಾರು 7 ಲಕ್ಷ ಕೋಟಿ ರೂಪಾಯಿ ಮೌಲ್ಯದ ಸಂಪತ್ತು ಕೊಳ್ಳೆ ಹೊಡೆದಿದ್ದಾರೆ ಎನ್ನಲಾಗಿದೆ,

1951ರ ಮೇ 21 ರಂದು ಟೋಕಿಯೋ ಮೆಷಿನ್ ಮುಖ್ಯಸ್ಥ ಕೆ.ಕೆ ಚಿತ್ತರಂಜನ್ ಅವರು ಕಾಮನ್ ವೆಲ್ತ್ ಸಂಬಂಧಗಳ ಕಾರ್ಯದರ್ಶಿ ಬಿ.ಎನ್. ಚಕ್ರವರ್ತಿ ಅವರಿಗೆ ಬರೆಜದ ಪತ್ರದಲ್ಲಿ ಸಂಶಯ ವ್ಯಕ್ತ ಪಡಿಸಿದ್ದರು.

ಬೋಸ್ ಸಹಚರ ಹಾಗೂ ಪ್ರಚಾರ ಸಚಿವ ಎಸ್.ಎ ಅಯ್ಯರ್ ಹಾಗೂ ಇಂಡಿಯನ್  ಇಂಡಿಪೆಂಡೆನ್ಸ್ ಲೀಗ್ ನ ಟೋಕಿಯೋ ಮುಖ್ಯಸ್ಥ ಮುಂಗಾ ರಾಮಮೂರ್ತಿ  ವಿರುದ್ಧ ಇಂಡಿಯನ್ ಇಂಡಿಪೆಂಡನ್ಸ್ ಲೀಗ್ ನ ನಿಧಿ ದುರ್ಬಳಕೆ ದುರ್ಬಳಕೆ ಮಾಡಿಕೊಂಡ ಅರೋಪವಿದೆ. ಜತೆಗೆ ನೇತಾಜಿ ಅವರ ವೈಯಕ್ತಿಕ ಆಸ್ತಯ ವಿಚಾರದಲ್ಲೂ ಇದಿ ನಡೆದಿದೆ ಎಂಬ ಸಂಶಯವಿದೆ ಅಪರೂಪದ ಪ್ರಾಚೀನ ವಸ್ತುಗಳು, ವಜ್ರದ ಆಭರಣಗಳು, ಚಿನ್ನ ಹಾಗೂ ಇತರ ಅಮೂಲ್ಯ ವಸ್ತುಗಳು ಅಲ್ಲಿದ್ದವು ಎಂದು ಬರೆಯಲಾಗಿದೆ.

ಇದಕ್ಕೆ ಪ್ರತಿಯಾಗಿ ಕೆ.ಕೆ ಚಿತ್ತೂರ್ ಅವರು  1951ರ ಅಕ್ಟೋಬರ್ 20 ರಂದು ಪತ್ರ ಬರೆದು, ಭಾರಿ ಪ್ರಮಾಣದ ಚಿನ್ನದ ಆಭರಣಗಳನ್ನು ಹಾಗೂ ಅಮೂಲ್ಯ ಹರಳುಗಳು ನೇತಾಜಿ ಜೊತೆಗಿದ್ದವು. ಆದರೆ ದುರಂತಕ್ಕೀಡಾದ ವಿಮಾನದಲ್ಲಿ ಕೇವಲ ಎರಡು ಸೂಟ್ ಕೇಸ್ ಗಳು ಮಾತ್ರ ಒಯ್ಯಲು ಅವಕಾಶವಿತ್ತು ಎಂದು ಟೋಕಿಯೋ ಮಿಷನ್ ಗೆ ಪತ್ರ ಬರೆದಿದೆ. ಮತ್ತೊಂದು ಪತ್ರದಲ್ಲಿ ಜಪಾನ್ ನ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಕೂಡ ಭಾರತಕ್ಕೆ ಬರೆದ ಪತ್ರದಲ್ಲಿ ಅಯ್ಯರ್ ಅವರ ಚಟುವಟಿಕೆಗಳು ಅನುಮಾನಾಸ್ಪದವಾಗಿವೆ ಎಂದು ಸ್ಪಷ್ಟ ಪಡಿಸಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com