ರಾಷ್ಟ್ರಪತಿ, ಪ್ರಧಾನಿಯಿಂದ ನೌಕಾಪಡೆಗಳ ಶಕ್ತಿ ಪ್ರದರ್ಶನ ವೀಕ್ಷಣೆ

ಇಲ್ಲಿ ಆರಂಭಗೊಂಡಿರುವ ಐದು ದಿನಗಳ ಅತಿದೊಡ್ಡ ನೌಕೆ ಪ್ರದರ್ಶನ ಮತ್ತು ಐಎಫ್ ಆರ್ ಉತ್ಸವದ ಮೂರನೇ ದಿನವಾದ ಶನಿವಾರ ನಮ್ಮ ದೇಶದ ಮೂರೂ ರಕ್ಷಣಾ ಪಡೆಗಳ...
ಐಎನ್ ಎಸ್ ಸುಮಾತ್ರದಲ್ಲಿ ಕುಳಿತು ನೌಕಾಪಡೆಗಳ ಪ್ರದರ್ಶನ ವೀಕ್ಷಿಸುತ್ತಿರುವ ರಾಷ್ಟ್ರಪತಿ ಮತ್ತು ಪ್ರಧಾನ ಮಂತ್ರಿ
ಐಎನ್ ಎಸ್ ಸುಮಾತ್ರದಲ್ಲಿ ಕುಳಿತು ನೌಕಾಪಡೆಗಳ ಪ್ರದರ್ಶನ ವೀಕ್ಷಿಸುತ್ತಿರುವ ರಾಷ್ಟ್ರಪತಿ ಮತ್ತು ಪ್ರಧಾನ ಮಂತ್ರಿ

ವಿಶಾಖಪಟ್ನಂ: ಇಲ್ಲಿ ಆರಂಭಗೊಂಡಿರುವ ಐದು ದಿನಗಳ ನೌಕೆ ಪ್ರದರ್ಶನ ಮತ್ತು ಐಎಫ್ ಆರ್ ಉತ್ಸವದ ಮೂರನೇ ದಿನವಾದ ಶನಿವಾರ ನಮ್ಮ ದೇಶದ ಮೂರೂ ರಕ್ಷಣಾ ಪಡೆಗಳ ಮುಖ್ಯ ಕಮಾಂಡರ್ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಇಂಟರ್ ನ್ಯಾಷನಲ್ ಫ್ಲೀಟ್ ರಿವ್ಯೂ (ಐಎಫ್ ಆರ್ ) ನ್ನು ಪರೀಕ್ಷಿಸಿದರು. ಅವರ ಜೊತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ರಕ್ಷಣಾ ಸಚಿವ ಮನೋಹರ್ ಪರ್ರಿಕರ್ ಸಹ ಇದ್ದಾರೆ.

ಈ ಸಂದರ್ಭದಲ್ಲಿ ನೌಕಾಪಡೆ ತನ್ನ ಸಾಮರ್ಥ್ಯ ಮತ್ತು ತಾಂತ್ರಿಕ ಶ್ರೇಷ್ಠತೆಯನ್ನು ಪ್ರದರ್ಶಿಸಲಿದೆ. ಇಂದಿನ ಕಾರ್ಯಕ್ರಮದಲ್ಲಿ ಸುಮಾರು 90 ನೌಕೆಗಳು ಭಾಗವಹಿಸಲಿವೆ. ಸುಮಾರು 50 ದೇಶಗಳ ರಕ್ಷಣಾ ಪಡೆಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿವೆ. ಬಂಗಾಳ ಕೊಲ್ಲಿಯ ಸಾಗರದಲ್ಲಿ ಚೀನಾ, ರಷ್ಯಾ, ಅಮೆರಿಕಾ, ಜಪಾನ್, ವಿಯೆಟ್ನಾಂ, ಇಸ್ರೇಲ್, ಫ್ರಾನ್ಸ್, ಬ್ರಿಟನ್ ಮತ್ತು ಆಸ್ಟ್ರೇಲಿಯಾ ದೇಶಗಳ ಹಡಗುಗಳು ಭಾಗವಹಿಸಲಿವೆ.

ಇಂದಿನ ಪ್ರದರ್ಶನದ ಮುಖ್ಯ ಆಕರ್ಷಣೆ ಐಎನ್ ಎಸ್ ವಿರಾಟ್ ಮತ್ತು ಐಎನ್ ಎಸ್ ವಿಕ್ರಮಾದಿತ್ಯ, ಐಎನ್ ಎಸ್ ಸುಮಿತ್ರ ಯುದ್ಧ ನೌಕೆಗಳ ಪ್ರದರ್ಶನ. ವಿಶ್ವದ ಯುದ್ಧ ನೌಕೆಗಳು ಮಾತ್ರವಲ್ಲದೆ ಭಾರತೀಯ ಯುದ್ಧ ನೌಕಾಪಡೆ ತನ್ನ ಕ್ಷಿಪಣಿ ಶಸ್ತ್ರಾಸ್ತ್ರ ಸಾಮರ್ಥ್ಯ ಮತ್ತು ಜಲಾಂತರ್ಗಾಮಿ ಹೋರಾಟದ ಶಕ್ತಿಯನ್ನು ಪ್ರದರ್ಶಿಸಲಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com