ವೈದ್ಯರು ಔಷಧ ಕಂಪನಿಗಳಿಂದ ಉಡುಗೊರೆ ಪಡೆಯುವುದಕ್ಕೆ ಬೀಳಲಿದೆ ಕಡಿವಾಣ

ವೈದ್ಯಕೀಯ ಕ್ಷೇತ್ರದಲ್ಲಿ ನಡೆಯುವ ಭ್ರಷ್ಟಾಚಾರವನ್ನು ತಡೆಗಟ್ಟಲು ಭಾರತೀಯ ವೈದ್ಯ ಮಂಡಳಿ ಮುಂದಾಗಿದೆ.
ವೈದ್ಯರು ಔಷಧ ಕಂಪನಿಗಳಿಂದ ಉಡುಗೊರೆ ಪಡೆಯುವುದಕ್ಕೆ ಬೀಳಲಿದೆ ಕಡಿವಾಣ
ವೈದ್ಯರು ಔಷಧ ಕಂಪನಿಗಳಿಂದ ಉಡುಗೊರೆ ಪಡೆಯುವುದಕ್ಕೆ ಬೀಳಲಿದೆ ಕಡಿವಾಣ

ನವದೆಹಲಿ: ವೈದ್ಯಕೀಯ ಕ್ಷೇತ್ರದಲ್ಲಿ ನಡೆಯುವ ಭ್ರಷ್ಟಾಚಾರವನ್ನು ತಡೆಗಟ್ಟಲು ಭಾರತೀಯ ವೈದ್ಯ ಮಂಡಳಿ ಮುಂದಾಗಿದ್ದು ವೈದ್ಯರು ಔಷಧ ಕಂಪನಿಗಳಿಂದ ಉಡುಗೊರೆ ಸ್ವೀಕರಿಸುವುದನ್ನು ಅಕ್ರಮವೆಂದು ಪರಿಗಣಿಸಲು ಮಾರ್ಚಸೂಚಿಗಳನ್ನು ಹಾರಿಗೆ ತರಲಿದೆ.
ತಮ್ಮ ಸಂಸ್ಥೆಯ ಔಷಧಗಳನ್ನು ಮಾರುಕಟ್ಟೆಯಲ್ಲಿ ಉತ್ತೇಜಿಸುವುದಕ್ಕೆ ಔಷಧ ಕಂಪನಿಗಳು ವೈದ್ಯರಿಗೆ ಉಡುಗೊರೆ ನೀಡುವ ಪ್ರವೃತ್ತಿ ಬೆಳೆಸಿಕೊಂಡಿವೆ. ಇದರಿಂದಾಗಿ ವೈದ್ಯಕೀಯ ಕ್ಷೇತ್ರದಲ್ಲೂ ಔಷಧಗಳಿಗೆ ಸಂಬಂಧಿಸಿದಂತೆ ತಲೆದೋರಿರುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ವೈದ್ಯ ಮಂಡಳಿ ಮುಂದಾಗಿದೆ. ಭಾರತೀಯ ವೈದ್ಯ ಮಂಡಳಿಯ ವೃತ್ತಿಪರ ನೀತಿ, ಶಿಷ್ಟಾಚಾರ ಮತ್ತು ನೈತಿಕ ನಿಯಮಾವಳಿ, 2015 ರ ಅಡಿಯಲ್ಲಿ ಹೊಸ ಮಾರ್ಗಸೂಚಿಗಳಲ್ಲಿ ವೈದ್ಯರು ಔಷಧ ಕಂಪನಿಗಳಿಂದ ಉಡುಗೊರೆ ಸ್ವೀಕರಿಸುವುದನ್ನು ಅಕ್ರಮವೆಂದು ಪರಿಗಣಿಸುವ ಅಂಶವನ್ನು ಜಾರಿಗೆ ತರಲಾಗುತ್ತಿದೆ.
ಉಡುಗೊರೆಗಳನ್ನು ಸ್ವೀಕರಿಸುವುದನ್ನು ತಡೆಗಟ್ಟುವ ಮಾರ್ಗಸೂಚಿಗಳು ಈ ಹಿಂದೆಯೇ ಇತ್ತು, ಆದರೆ ಅದನ್ನು ಸಮರ್ಪಕವಾಗಿ ಜಾರಿಗೊಳಿಸಲಾಗಿರಲಿಲ್ಲವಾದ ಕಾರಣ ಈಗ ಜಾರಿಗೆ ತರಲಾಗುತ್ತಿದೆಯಷ್ಟೆ ಎಂದು ಎಂಸಿಐ ನ ಸದಸ್ಯರೊಬ್ಬರು ಹೇಳಿದ್ದಾರೆ.
5 ಸಾವಿರ- 10 ಸಾವಿರ ರೂ ಮೌಲ್ಯದ ಉಡುಗೊರೆ ಪಡೆದ ವೈದ್ಯರಿಗೆ 3 ತಿಂಗಳ ಕಾಲ
ಪರವಾನಗಿ ರದ್ದುಗೊಳಿಸಲಾಗುತ್ತದೆ. 10 ಸಾವಿರದಿಂದ 50 ಸಾವಿರ ರೂ ಮೌಲ್ಯದ ಉಡುಗೊರೆ ಸ್ವೀಕರಿಸಿದ ವೈದ್ಯರಿಗೆ 6 ತಿಂಗಳು. 50 ಸಾವಿರ ರೂ -1 ಲಕ್ಷ ರೂ ಮೌಲ್ಯದ ಉಡುಗೊರೆ ಪಡೆದ ವೈದ್ಯರಿಗೆ 1 ವರ್ಷ ಹಾಗೂ 1 ಲಕ್ಷಕ್ಕೂ ಹೆಚ್ಚು ಮೌಲ್ಯದ ಉಡುಗೊರೆ ಪಡೆದ ವೈದ್ಯರು 1 ವರ್ಷಕ್ಕಿಂತಲೂ ಹೆಚ್ಚು ಅವಧಿಗೆ ಪರವಾನಗಿ ಕಳೆದುಕೊಳ್ಳಲಿದ್ದಾರೆ.     

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com