ಉಲ್ಕಾಪಾತದಿಂದ ಬಸ್ ಚಾಲಕ ಸಾವು!

ತಮಿಳುನಾಡಿನ ವೆಲ್ಲೂರಿನ ಇಂಜಿನಿಯರಿಂಗ್ ಕಾಲೇಜ್ ನ ಬಸ್ ಚಾಲಕನೊಬ್ಬ ಉಲ್ಕಾಪಾತಕ್ಕೆ ಬಲಿಯಾಗಿದ್ದಾರೆ.
ಸ್ಪೋಟ ಸಂಭವಿಸಿದ ಸ್ಥಳದಲ್ಲಿ ಬಾಂಬ್ ನಿಷ್ಕ್ರಿಯ ದಳದ ಪರಿಶೀಲನೆ
ಸ್ಪೋಟ ಸಂಭವಿಸಿದ ಸ್ಥಳದಲ್ಲಿ ಬಾಂಬ್ ನಿಷ್ಕ್ರಿಯ ದಳದ ಪರಿಶೀಲನೆ

ವೆಲ್ಲೂರು: ತಮಿಳುನಾಡಿನ ವೆಲ್ಲೂರಿನ ಇಂಜಿನಿಯರಿಂಗ್ ಕಾಲೇಜ್ ನ ಬಸ್ ಚಾಲಕನೊಬ್ಬ ಉಲ್ಕಾಪಾತಕ್ಕೆ ಬಲಿಯಾಗಿದ್ದಾರೆ. ನಟ್ರಂಪಲ್ಲಿಯಲ್ಲಿರುವ ಇಂಜಿನಿಯರಿಂಗ್ ಕಾಲೇಜಿನ ಬಸ್ ಚಾಲಕ ಕಾಮರಾಜ್ ಉಲ್ಕಾಪಾತಕ್ಕೆ ಸಿಲುಕಿ ಮೃತಪಟ್ಟಿರುವ ವ್ಯಕ್ತಿ.
ಮೃತರ ಕುಟುಂಬಕ್ಕೆ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ 1 ಲಕ್ಷ ರೂ ಪರಿಹಾರ ಘೋಷಿಸಿದ್ದಾರೆ. ಕಾಲೇಜಿನ ಅವರಣದಲ್ಲೇ ಉಲ್ಕಾಪಾತವಾಗಿದ್ದು, ಪ್ರಾರಂಭದಲ್ಲಿ ಜೆಲಟಿನ್ ತುಂಡುಗಳಿಂದ ಸ್ಫೋಟ ಸಂಭವಿಸಿ ಈ ದುರ್ಘಟನೆ ಸಂಭವಿಸರಬಹುದು ಎಂದು ಊಹಿಸಲಾಗಿತ್ತು. ಕಾಲೇಜಿನಲ್ಲಿರುವ ಉದ್ಯಾನ ಪಾಲಕರಾಗಿದ್ದ ಶಶಿ ಕುಮಾರ್ ಹಾಗೂ ಮುರುಳಿ ಕಸಕ್ಕೆ ಬೆಂಕಿ ಹಚ್ಚುವಾಗ, ಕಾಲೇಜು ಕಟ್ಟಡ ನಿರ್ಮಾಣದ ವೇಳೆ ಬಳಕೆಯಾಗದೇ ಉಳಿದಿದ್ದ ಜೆಲಟಿನ್ ತುಂಡುಗಳಿಗೂ ಅಜಾಗರೂಕತೆಯಿಂದ ಬೆಂಕಿ ಹಚ್ಚಿದ್ದಾರೆ ಪರಿಣಾಮ ಸ್ಫೋಟ ಸಂಭವಿಸಿದೆ ಎಂದು ಶಂಕಿಸಲಾಗಿತ್ತು. ಆದರೆ ಪ್ರತ್ಯಕ್ಷದರ್ಶಿಗಳು ಸ್ಫೋಟ ಸಂಭವಿಸುವ ವೇಳೆ ಆಕಾಶದಿಂದ ನಿಗೂಢ ವಸ್ತುವೊಂದು ಬಿದ್ದಿರುವುದನ್ನು ಕಂಡಿದ್ದಾಗಿ ಹೇಳಿದ್ದಾರೆ.
ಈ ಬಗ್ಗೆ ತನಿಖೆ ನಡೆಸಲಾಗಿದ್ದು, ಉಲ್ಕಾಪಾತದಿಂದ ಚಾಲಕನ ಸಾವು ಸಂಭವಿಸಿರುವುದು ಸ್ಪಷ್ಟವಾಗಿದೆ. ಸಾಮಾನ್ಯವಾಗಿ ಉಲ್ಕೆಗಳು ಭೂಮಿಯ ಕಕ್ಷೆ ತಲುಪುವ ವೇಳೆಗೆ ಉರಿದು ಬೂದಿಯಾಗಿರುತ್ತವೆ. ಆದರೆ ಕೆಲವೊಮ್ಮೆ ಉಲ್ಕೆಗಳು ಪರಿಣಾಮಕಾರಿಯಾಗಿರುತ್ತವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com