ವಾಟ್ಸಪ್‌, ಸ್ಕೈಪ್‌, ಎಸ್ಸೆಮ್ಮೆಸ್‌ ತಲಾಖ್‌ ಸಿಂಧು: ಎಐಎಮ್‌ಪಿಎಲ್‌ಬಿ

ಮುಸ್ಲಿಂ ಮಹಿಳೆಯರ ಕಾಳಜಿ ವಿಚಾರವಾಗಿ ಸುಪ್ರೀಂಕೋರ್ಟ್ ವಾಟ್ಸಪ್, ಎಸ್ಸೆಮ್ಮೆಸ್ ಇತ್ಯಾದಿಗಳ ಮೂಲಕ ತಲಾಖ್ ಕಾನೂನು ಬದ್ಧವಲ್ಲ ಎಂದು ಅಭಿಪ್ರಾಯಪಟ್ಟ...
ಮುಸ್ಲಿಂ ಮಹಿಳೆಯರು
ಮುಸ್ಲಿಂ ಮಹಿಳೆಯರು

ನವದೆಹಲಿ: ಮುಸ್ಲಿಂ ಮಹಿಳೆಯರ ಕಾಳಜಿ ವಿಚಾರವಾಗಿ ಸುಪ್ರೀಂಕೋರ್ಟ್ ವಾಟ್ಸಪ್, ಎಸ್ಸೆಮ್ಮೆಸ್ ಇತ್ಯಾದಿಗಳ ಮೂಲಕ ತಲಾಖ್ ಕಾನೂನು ಬದ್ಧವಲ್ಲ ಎಂದು ಅಭಿಪ್ರಾಯಪಟ್ಟ ಬೆನ್ನಲ್ಲೆ ಇದೀಗ ಅಖಿಲ ಭಾರತೀಯ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ(ಎಐಎಮ್‌ಪಿಎಲ್‌ಬಿ) ಸಾಮಾಜಿಕ ಜಾಲತಾಣದಲ್ಲಿ ತಲಾಕ್ ಕೊಟ್ಟರೆ ಅದು ಸಿಂಧು ಎಂದು ಹೇಳಿದೆ.

ಸಾರ್ವಜನಿಕ ಹಿತಾಸಕ್ತಿ ದಾವೆಯೊಂದರ ಕುರಿತಂತೆ ಸುಪ್ರೀಂಕೋರ್ಟ್ ಈ ಅಭಿಪ್ರಾಯ ಪಟ್ಟಿತ್ತು. ಇದೀಗ ಸುಪ್ರೀಂಕೋರ್ಟ್ ಅಭಿಪ್ರಾಯವನ್ನೇ ಪ್ರಶ್ನಿಸುವಂತಾ ಹೇಳಿಕೆಯನ್ನು ಎಐಎಮ್‌ಪಿಎಲ್‌ಬಿ ನೀಡಿದೆ.

ಖಾಸಗಿ ಸುದ್ದಿವಾಹಿನಿಯೊಂದಕ್ಕೆ ಪ್ರತಿಕ್ರಿಯಿಸಿದ ಕಾನೂನು ಮಂಡಳಿ ವಕ್ತಾರ ಮೊಹಮ್ಮದ್ ಅಬ್ದುಲ್ ರಾಹುಲ್ ಖುರೇಶಿ ಪುರುಷನಿಗೆ ವಿಚ್ಛೇದನ ನೀಡುವ ಹಕ್ಕಿದೆ. ಅದನ್ನು ವಾಟ್ಸಪ್‌, ಎಸ್ಸೆಮ್ಮೆಸ್‌, ಫೇಸ್‌ಬುಕ್‌ ಯಾವುದೇ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಪಡಿಸಬಹುದು ಅದು ಸಿಂಧುವಾಗುತ್ತದೆ. ನಂತರದ ದಿನಗಳಲ್ಲಿ ಮಹಿಳೆಯೂ ಮತ್ತೊಬ್ಬರನ್ನು ವಿವಾಹವಾಗುವ ಅವಕಾಶ ಇದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com