ರೈಲಿನಲ್ಲಿ ಪ್ರಯಾಣಿಕರಿಗೆ 25 ರೀತಿಯ ಚಹಾ ಪೂರೈಕೆ

ರೈಲಿನಲ್ಲಿ ಪ್ರಯಾಣ ಮಾಡುವಾಗ ಏನಾದರೂ ಕುರುಕಲು ತಿನ್ನಬೇಕು, ಚಹಾ ಕುಡಿಯಬೇಕು ಎಂಬ ಆಸೆ ಪ್ರಯಾಣಿಕರಿಗಿರುತ್ತದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ರೈಲಿನಲ್ಲಿ ಪ್ರಯಾಣ ಮಾಡುವಾಗ ಏನಾದರೂ ಕುರುಕಲು ತಿನ್ನಬೇಕು, ಚಹಾ ಕುಡಿಯಬೇಕು ಎಂಬ ಆಸೆ ಪ್ರಯಾಣಿಕರಿಗಿರುತ್ತದೆ. ಅದಕ್ಕಾಗಿ ಚಹಾ ಪ್ರಿಯರಿಗಾಗಿ 25 ವಿಧದ ಚಹಾವನ್ನು ಪೂರೈಸುತ್ತಿದೆ ಭಾರತೀಯ ರೈಲ್ವೆ ಮತ್ತು ಪ್ರವಾಸೋದ್ಯಮ ನಿಗಮ(ಐಆರ್ ಸಿಟಿಸಿ).

ದೇಸಿ ಚಾಯ್ ನಿಂದ ಆರಂಭಗೊಂಡು ಆಮ್ ಪಾಪಡ್ ಚಾಯ್, ಹರಿ ಮಿರ್ಜ್ ಚಾಯ್, ಕುಲ್ಲಾಡ್ ಚಾಯ್, ಶುಂಠಿ ತುಳಸಿ ಚಹಾ, ಜೇನು ಶುಂಠಿ ನಿಂಬೆ ಹೀಗೆ 25 ಬಗೆಯ ಚಹಾಗಳು ರೈಲುಗಳಲ್ಲಿ ಸಿಗುತ್ತವೆ. ನಿಮಗೆ ಯಾವ ರೀತಿಯ ಚಹಾ ಬೇಕು ಎಂಬುದನ್ನು ಮೊಬೈಲ್ ಆಪ್ ಮೂಲಕ ಆರ್ಡರ್ ನೀಡಬಹುದಾಗಿದೆ ಎಂದು ಐಆರ್ ಸಿಟಿಸಿ ತಿಳಿಸಿದೆ.

ಪ್ರಯಾಣಿಕರ ರುಚಿಗೆ ಅನುಗುಣವಾಗಿ ಚಹಾ ಪೂರೈಕೆ ಮಾಡುವ ಸಲುವಾಗಿ ಕೆಫೆ ಸಮೂಹವಾದ ಚಾಯೋಸ್ ಜತೆ ಐಆರ್ ಸಿಟಿಸಿ ಒಪ್ಪಂದ ಮಾಡಿಕೊಂಡಿದೆ. ಅಲ್ಲದೇ 300 ರೂಪಾಯಿ ಹೆಚ್ಚು ಮೊತ್ತದ ಇ ಕೆಟರಿಂಗ್ ಆರ್ಡರ್ ಮೇಲೆ ಶೇ.10ರಷ್ಟು ಹಣ ವಾಪಸ್ ನೀಡಲು ನಿರ್ಧರಿಸಲಾಗಿದೆ ಎಂದು ಐಆರ್ ಸಿಟಿಸಿ ಅಧ್ಯಕ್ಷ ಅರುಣ್ ಕುಮಾರ್ ಮೊನೋಚಾ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com