ವಾರಂಗಲ್ ಬಳಿ ಯುವತಿಯನ್ನು ವಿವಸ್ತ್ರಗೊಳಿಸಿ ಮೆರವಣಿಗೆ

ಪತ್ನಿ ಸ್ವರೂಪಳಿಗೆ ಪರಿಹಾರಧನ ನೀಡಬೇಕೆಂದು ಊರಿನ ಹಿರಿಯರು ಪಂಚಾಯ್ತಿ ನಡೆಸಿ ತೀರ್ಮಾನಿಸಿದ್ದರು. ಆದರೆ ಮೊದಲ ಪತ್ನಿಗೆ ಪರಿಹಾರಧನ ನೀಡಲು ರವಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ವಾರಂಗಲ್: ಇಲ್ಲಿನ ವರ್ಧನ್ನಪೇಟ್ ಪ್ರದೇಶದಲ್ಲಿ ಯುವತಿಯೊಬ್ಬಳನ್ನು ವಿವಸ್ತ್ರಗೊಳಿಸಿ ಮೆರವಣಿಗೆ ನಡೆಸಿದ ಘಟನೆ ವರದಿಯಾಗಿದೆ.
ಏನಿದು ಪ್ರಕರಣ? 
ಅಂಗೋತು ತೌರ್ಯ ಅಲಿಯಾಸ್ ಅನಿತಾ (18) ಎಂಬಾಕೆ ಆಟೋಚಾಲಕ ಬನೋತು ರವಿ (35) ಎಂಬಾತನೊಂದಿಗೆ ಓಡಿ ಹೋಗಿ 2015 ಮಾರ್ಚ್‌ನಲ್ಲಿ ಮದುವೆಯಾಗಿದ್ದಳು. ಈ ರವಿಗೆ ಮೊದಲು ಒಂದು ಮದುವೆಯಾಗಿದ್ದು ಅದರಲ್ಲಿ ಎರಡು ಮಕ್ಕಳಿವೆ. ರವಿಯ ಮೊದಲ ಪತ್ನಿ ಸ್ವರೂಪ, ಅನಿತಾ ಜತೆಗಿನ ಸಂಬಂಧವನ್ನು ವಿರೋಧಿಸಿದ್ದು, ರವಿ ಮತ್ತು ಅನಿತಾ ಜತೆಯಾಗಿಯೇ ಸಂಸಾರ ನಡೆಸುತ್ತಿದ್ದರು.
ಪತ್ನಿ ಸ್ವರೂಪಳಿಗೆ ಪರಿಹಾರಧನ ನೀಡಬೇಕೆಂದು ಊರಿನ ಹಿರಿಯರು ಪಂಚಾಯ್ತಿ ನಡೆಸಿ ತೀರ್ಮಾನಿಸಿದ್ದರು. ಆದರೆ ಮೊದಲ ಪತ್ನಿಗೆ ಪರಿಹಾರಧನ ನೀಡಲು ರವಿ ನಿರಾಕರಿಸಿದ್ದನು. ಇದರಿಂದ ರೊಚ್ಚಿಗೆದ್ದ ಸ್ವರೂಪಳ ಸಂಬಂಧಿಕರು ನೆರಮನೆಯಲ್ಲಿ ಆಶ್ರಯ ಪಡೆದಿದ್ದ ಅನಿತಾಳನ್ನು ಹೊರಗೆಳೆದು ಆಕ್ರಮಿಸಿದ್ದಾರೆ. ಆಕೆಯ ತೊಡೆ ಮತ್ತು ಗುಪ್ತಾಂಗದ ಮೇಲೆ ಬೆಂಕಿ ಕೊಳ್ಳಿಯಿಂದ ಸುಡಲಾಗಿದೆ. ಇಷ್ಟೆಲ್ಲಾ ಆದ ನಂತರ ಆಕೆಯನ್ನು ವಿವಸ್ತ್ರಗೊಳಿಸಿ ಗ್ರಾಮದ ಬೀದಿಯಲ್ಲಿ ಮೆರವಣಿಗೆ ನಡೆಸಲಾಗಿದೆ.
ವಿಷಯ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕಾಗಮಿಸಿ ಅನಿತಾಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಭಾನುವಾರ ನಡೆದ ಪಂಚಾಯ್ತಿಯಲ್ಲಿ ಸ್ವರೂಪಳಿಗೆ ರವಿ ರು.7.50 ಲಕ್ಷ ನೀಡುವಂತೆ ಹಿರಿಯರು ಆದೇಶಿಸಿದ್ದರು. ಆದರೆ ತಾನು ತನ್ನ ಮಕ್ಕಳ ಹೆಸರಲ್ಲಿ ಅಷ್ಟು ಹಣವನ್ನು ಡೆಪಾಸಿಟ್ ಮಾಡುತ್ತೇನೆ. ಸ್ವರೂಪಳಿಗೆ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದನು.
ಸೋಮವಾರ ಮತ್ತೆ ಪಂಚಾಯ್ತಿ ಸೇರಿದಾಗ ಸ್ವರೂಪಳ ಸಂಬಂಧಿಕರು ರವಿ ಮೇಲೆ ದಾಳಿ ನಡೆಸಿದ್ದಾರೆ. ಈ ನಡುವೆ ಅವರ ದಾಳಿಯಿಂದ ತಪ್ಪಿಸಿಕೊಂಡ ರವಿ ಪೊಲೀಸರಿಗೆ ಫೋನ್ ಮಾಡಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮನ್ನೂರು ಅಸಿಸ್ಟೆಂಟ್ ಕಮಿಷನರ್ ಆಫ್ ಪೊಲೀಸ್ ಎಸ್ ಮಹೆಂದರ್ ಸ್ವರೂಪ ಅವರನ್ನು ಬಂಧಿಸಿತ್ತು, ತಲೆ ಮರೆಸಿಕೊಂಡಿರುವ ಇನ್ನಿಬ್ಬರ ಬಂಧನಕ್ಕಾಗಿ ಶೋಧ ನಡೆಯುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com