ಕ್ಯಾಪ್ಟನ್ ಶಿಖರ್ ದೀಪ್ ಅವರು ಫೆಬ್ರವರಿ 6-7ರಂದು ಬಿಹಾರದಿಂದ ದೆಹಲಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಅವರು ಇದ್ದಕ್ಕಿದಂತೆ ಕಾಣೆಯಾಗಿದ್ದಾರೆ. ಶಿಖರ್ ದೀಪ್ ಅವರನ್ನು ಬರಮಾಡಿಕೊಳ್ಳಲು ರೈಲ್ವೆ ನಿಲ್ದಾಣಕ್ಕೆ ತೆರಳಿದ್ದ ಅವರ ಸಂಬಂಧಿಗೆ ಶಿಖರ್ ಅವರ ಲಗೇಜ್, ಫೋನ್, ವ್ಯಾಲೆಟ್ ಮಾತ್ರ ಪತ್ತೆಯಾಗಿದೆ. ವ್ಯಾಲೆಟ್ನಲ್ಲಿದ್ದ ಹಣ ಕಳುವಾಗಿದೆ. ಈ ಸಂಬಂಧ ಶಿಖರ್ ದೀಪ್ ಅವರ ಸಂಬಂಧಿ ರೈಲ್ವೆ ಪೊಲೀಸರಿಗೆ ದೂರು ನೀಡಿದ್ದಾರೆ.