ರೈಲ್ವೇ ಬಜೆಟ್ 2016: ಪ್ರಯಾಣದರದಲ್ಲಿ ಶೇ. 10 ಏರಿಕೆ ಸಾಧ್ಯತೆ

ಆರ್ಥಿಕ ಕುಸಿತವುಂಟಾಗಿರುವ ಕಾರಣ ಈ ಬಾರಿ ರೈಲು ಪ್ರಯಾಣಿಕ ದರದಲ್ಲಿ ಶೇ. 5 ರಿಂದ ಶೇ. 10 ರಷ್ಟು ಏರಿಕೆ ಮಾಡುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತದೆ...
ಸುರೇಶ್ ಪ್ರಭು
ಸುರೇಶ್ ಪ್ರಭು
ನವದೆಹಲಿ: ಆರ್ಥಿಕ ಕುಸಿತವುಂಟಾಗಿರುವ ಕಾರಣ ಈ ಬಾರಿ ರೈಲು ಪ್ರಯಾಣಿಕ ದರದಲ್ಲಿ  ಶೇ. 5 ರಿಂದ ಶೇ. 10 ರಷ್ಟು ಏರಿಕೆ ಮಾಡುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತದೆ.
7ನೇ ವೇತನ ಸಮಿತಿ ಶಿಫಾರಸನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ರು. 32,000 ಕೋಟಿ ಹೆಚ್ಚಿಗೆ ಹಣದ ಹೊರೆಯನ್ನು ಸಮತೂಗಿಸುವುದಕ್ಕಾಗಿ ಪ್ರಯಾಣದರದಲ್ಲಿ ಏರಿಕೆ ಮಾಡಲು ರೈಲ್ವೇ ಸಚಿವ ಸುರೇಶ್ ಪ್ರಭು ತೀರ್ಮಾನಿಸಿದ್ದಾರೆ ಎಂದು ರೈಲ್ವೇ ಸಚಿವಾಲಯದ ಮೂಲಗಳು ಹೇಳಿವೆ.
ಅದೇ ವೇಳೆ  ಈ ಬಾರಿಯ ರೈಲ್ವೇ ಬಜೆಟ್ ಖರ್ಚು ವೆಚ್ಚದಲ್ಲಿ ರು. 8,000 ಕೋಟಿ ಕಡಿತ ಮಾಡಲಾಗಿದೆ.  ಆದಾಗ್ಯೂ, ಬೇರ್ಯಾವ ರೀತಿಯಲ್ಲಿಯೂ ಖರ್ಚು ವೆಚ್ಚಗಳನ್ನು ಸರಿತೂಗಿಸಲು ಸಾಧ್ಯವಾಗದೇ ಇರುವ ಕಾರಣ ಪ್ರಯಾಣದರ ಏರಿಕೆ ಮಾಡಲು ಸಚಿವಾಲಯ ತೀರ್ಮಾನಿಸಿದೆ ಎಂದು ಬಲ್ಲಮೂಲಗಳು ಹೇಳಿವೆ.
ಫೆ. 25ರಂದು  ರೈಲ್ವೇ ಬಜೆಟ್ ಮಂಡನೆಯಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com