ಇತರ ಸಿಯಾಚಿನ್ ಹುತಾತ್ಮ ಯೋಧರ ಮೃತದೇಹ ಸಾಗಣೆಗೆ ಪ್ರತಿಕೂಲ ಹವಾಮಾನ ಅಡ್ಡಿ

ಸಿಯಾಚಿನ್ ನಲ್ಲಿ ಹಿಮಪಾತಕ್ಕೆ ಸಿಲುಕಿ ಹುತಾತ್ಮರಾಗಿರುವ 9 ಯೋಧರ ಪಾರ್ಥಿವಶರೀರವನ್ನು ದೆಹಲಿಗೆ ತಲುಪಿಸಲು ಪ್ರತಿಕೂಲ ಹವಾಮಾನ ಅಡ್ಡಿಯಾಗಿದೆ.
ಸಿಯಾಚಿನ್
ಸಿಯಾಚಿನ್

ಉದ್ಧಂಪುರ್:ಸಿಯಾಚಿನ್ ನಲ್ಲಿ ಹಿಮಪಾತಕ್ಕೆ ಸಿಲುಕಿ ಹುತಾತ್ಮರಾಗಿರುವ 9 ಯೋಧರ ಪಾರ್ಥಿವಶರೀರವನ್ನು ದೆಹಲಿಗೆ ತಲುಪಿಸಲು ಪ್ರತಿಕೂಲ ಹವಾಮಾನ ಅಡ್ಡಿಯಾಗಿದೆ.
ಕೇವಲ ಒಂದು ಗಂಟೆ ಅವಕಾಶ ಸಿಕ್ಕಿದರೂ ಹೊರತೆಗೆಯಲಾಗಿರುವ ಯೋಧರ ಮೃತದೇಹಗಳನ್ನು ದೆಹಲಿಗೆ  ತಲುಪಿಸಲಾಗುತ್ತದೆ ಎಂದು ಉತ್ತರ ಸೇನಾಪಡೆಯ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಡಿ ಎಸ್ ಹೂಡಾ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಯೋಧರ ದೇಹಗಳನ್ನು ಮೇಲೆತ್ತಲು ಸತತ ಪ್ರಯತ್ನ ನಡೆಸಲಾಗುತ್ತಿದ್ದರೂ ಸಹ ಪ್ರತಿಕೂಲ ಹವಾಮಾನದಿಂದಾಗಿ ರಕ್ಷಣಾ ಕಾರ್ಯಾಚರಣೆಗೆ ಬಳಸಲಾಗುವ ಹೆಲಿಕಾಫ್ಟರ್ ಗಳನ್ನು ಇಳಿಸಲು ಸಾಧ್ಯವಾಗುತ್ತಿಲ್ಲ ಎಂದು ಹೂಡಾ ಹೇಳಿದ್ದಾರೆ.
ಪ್ರತಿಕೂಲ ಹವಾಮಾನವಿದ್ದರೂ ಮೃತ ಯೋಧ ಹನುಮಂತಪ್ಪ ಕೊಪ್ಪದ್ ಅವರು ಗಂಭೀರ ಸ್ಥಿತಿಯಲ್ಲಿ ಜೀವಂತವಾಗಿರುವುದು ಪತ್ತೆಯಾದ ಹಿನ್ನೆಲೆಯಲ್ಲಿ ಸಾಕಷ್ಟು ಅಪಾಯ ಎದುರಾಗುವ ಹೊರತಾಗಿಯೂ ಅವರನ್ನು. ಹಿಮಪಾತಕ್ಕೆ ಸಿಲುಕಿರುವ ಯೋಧರ ಕುಟುಂಬದವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ, ಮೃತದೇಹಗಳನ್ನು ಹೊರತೆಗೆದ ಕೂಡಲೇ ದೆಹಲಿಯಿಂದ ಯೋಧರ ಊರುಗಳಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಹೂಡಾ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಯೋಧರ ಮೃತದೇಹಗಳನ್ನು ಸಿಯಾಚಿನ್ ಪೋಸ್ಟ್ ನಿಂದ ಹೆಲಿಪ್ಯಾಡ್ ವ್ಯವಸ್ಥೆ ಇರುವ ಗ್ಲೇಶಿಯರ್ ಸೆಕ್ಟರ್ ನ ಮತ್ತೊಂದು ಭಾಗಕ್ಕೆ ತಲುಪಿಸಲಾಗಿದೆ ಆದರೆ ಅಲ್ಲಿಂದ ನಿರಂತರವಾಗಿ ಹಿಮಪಾತವಾಗುತ್ತಿರುವುದರಿಂದ ಗ್ಲೇಶಿಯರ್ ಸೆಕ್ಟರ್ ನಿಂದ ಮುಂದೆ ಕ್ರಮಿಸಲು ಸಾಧ್ಯವಾಗುತ್ತಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com