ಸಿಪಿಐ(ಎಂ) ಮಾಜಿ ನಾಯಕ, ದಾಲ್ಮಿಯಾ ಪುತ್ರಿ ತೃಣಮೂಲ ಕಾಂಗ್ರೆಸ್ ಗೆ ಸೇರ್ಪಡೆ

ಪಶ್ಚಿಮ ಬಂಗಾಳದಲ್ಲಿ ಪ್ರಮುಖ ರಾಜಕೀಯ ಬೆಳವಣಿಗೆ ನಡೆದಿದ್ದು, ಸಿಪಿಎಂ ಪಕ್ಷದಿಂದ ಮಂತ್ರಿಯಾಗಿದ್ದ ಅಬ್ದುರ್ ರಜಾಕ್ ಮೊಲ್ಲಾಹ್, ವೈಶಾಲಿ ದಾಲ್ಮಿಯಾ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಅಬ್ದುರ್ ರಜಾಕ್ ಮೊಲ್ಲಾಹ್
ಅಬ್ದುರ್ ರಜಾಕ್ ಮೊಲ್ಲಾಹ್

ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ ಪ್ರಮುಖ ರಾಜಕೀಯ ಬೆಳವಣಿಗೆ ನಡೆದಿದ್ದು, ಸಿಪಿಎಂ ಪಕ್ಷದಿಂದ ಮಂತ್ರಿಯಾಗಿದ್ದ ಅಬ್ದುರ್ ರಜಾಕ್ ಮೊಲ್ಲಾಹ್,  ಭಾರತದ ಮಾಜಿ ಕ್ರಿಕೆಟಿಗ ಲಕ್ಷ್ಮಿ ರತನ್ ಶುಕ್ಲ ಹಾಗೂ ಬಿಸಿಸಿಐ ಮಾಜಿ ಅಧ್ಯಕ್ಷ ಜಗಮೋಹನ್ ದಾಲ್ಮಿಯಾ ಅವರ ಪುತ್ರಿ ವೈಶಾಲಿ ದಾಲ್ಮಿಯಾ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. 

ತೃಣಮೂಲ ಕಾಂಗ್ರೆಸ್ ನಾಯಕಿ, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ಅಬ್ದುರ್ ರಜಾಕ್  ಮೊಲ್ಲಾಹ್, ಲಕ್ಷ್ಮಿ ರತನ್ ಶುಕ್ಲ ವೈಶಾಲಿ ದಾಲ್ಮಿಯಾ ಅಧಿಕೃತವಾಗಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಈ ವರ್ಷ ವಿಧಾನಸಭಾ ಚುನಾವಣೆ ಎದುರಿಸಲಿರುವ ಪಕ್ಷಗಳ ಪೈಕಿ ಪಶ್ಚಿಮ ಬಂಗಾಳ ರಾಜ್ಯವು ಒಂದಾಗಿದ್ದು ಸಿಪಿಐ(ಎಂ) ಪಕ್ಷದ ಮಾಜಿ ಮಂತ್ರಿ ಸೇರಿದಂತೆ ಗಣ್ಯರು ತೃಣಮೂಲ ಕಾಂಗ್ರೆಸ್ ಗೆ ಸೇರ್ಪಡೆಯಾಗಿರುವುದು ಪಕ್ಷಕ್ಕೆ ಬಲ ಬಂದಂತಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com