ಜ್ಞಾನಪೀಠ ಪುರಸ್ಕೃತ ಮಳೆಯಾಳಂ ಕವಿ ಒಎನ್ ವಿ ಕುರಪ್ ನಿಧನ

ಖ್ಯಾತ ಮಲಯಾಳಂ ಕವಿ ಹಾಗೂ ಜ್ಞಾನಪೀಠ ವಿಜೇತ ಸಾಹಿತಿ ಒಟ್ಟಪ್ಲಾಕ್ಕಲ್ ನಂಬಿಯಾದಿಕ್ಕಲ್ ವೇಲು...
ಜ್ಞಾನಪೀಠ ಪ್ರಶಸ್ತಿಯೊಂದಿಗೆ ಒಎನ್ ವಿ ಕುರಪ್ ಹಾಗೂ ಅವರ ಪತ್ನಿ ಸರೋಜಿನಿ ಅಮ್ಮ
ಜ್ಞಾನಪೀಠ ಪ್ರಶಸ್ತಿಯೊಂದಿಗೆ ಒಎನ್ ವಿ ಕುರಪ್ ಹಾಗೂ ಅವರ ಪತ್ನಿ ಸರೋಜಿನಿ ಅಮ್ಮ
Updated on
ತಿರುವನಂತಪುರಂ: ಖ್ಯಾತ ಮಲಯಾಳಂ ಕವಿ ಹಾಗೂ ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ ಒಟ್ಟಪ್ಲಾಕ್ಕಲ್ ನಂಬಿಯಾದಿಕ್ಕಲ್ ವೇಲು ಕುರುಪ್ ಅವರು ಶನಿವಾರ ನಿಧನರಾಗಿದ್ದಾರೆ.
ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ 84 ವರ್ಷದ ಒಎನ್ ವಿ ಕುರಪ್ ಅವರು ಇಂದು ಸಂಜೆ 4.50ರ ಸುಮಾರಿಗೆ ತಿರುವನಂತಪುರಂನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳದರು. 
ಕುರುಪ್ ಕೇರಳದ ಪ್ರಮುಖ ಚಳುವಳಿಗಳಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದರು, ಇವರು ಸಾಕಷ್ಟು ಕವನ ಸಂಕಲನಗಳನ್ನು ಹೊರತಂದಿದ್ದಾರೆ ಮತ್ತು ಕೆಲವು ಚಿತ್ರಗಳಿಗೂ ಸಹ ಗೀತ ರಚನೆ ಮಾಡಿದ್ದಾರೆ.

ಕುರುಪ್ ಅವರಿಗೆ ಕೇಂದ್ರ ಸರ್ಕಾರ 1998ರಲ್ಲಿ ಪದ್ಮಶ್ರೀ ಮತ್ತು 2011ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿ ನೀಡಿ ಗೌರವಿಸಿತ್ತು. 2007ರಲ್ಲಿ ಇವರಿಗೆ ಜ್ಞಾನ ಪೀಠ ಪ್ರಶಸ್ತಿ ಲಭಿಸಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com