ಉತ್ತರ ಪತ್ರಿಕೆಯಲ್ಲಿ ಶುಭಸೂಚಕವಾದ ಓಂ, 786 ಬರೆದರೆ ಡಿಬಾರ್‌ ಶಿಕ್ಷೆ!

ಉತ್ತರಪ್ರದೇಶ ಪರೀಕ್ಷಾ ಮಂಡಳಿ ಹೈಸ್ಕೂಲು ಮತ್ತು ಪಿಯುಸಿ ವಿದ್ಯಾರ್ಥಿಗಳು ತಮ್ಮ ಉತ್ತರ ಪತ್ರಿಕೆಯಲ್ಲಿ ಶುಭಸೂಚಕವಾದ 'ಓಂ' ಅಥವಾ 786 ಸಂಖ್ಯೆಯನ್ನು...
ಓಂ
ಓಂ

ಲಖನೌ: ಉತ್ತರಪ್ರದೇಶ ಪರೀಕ್ಷಾ ಮಂಡಳಿ ಹೈಸ್ಕೂಲು ಮತ್ತು ಪಿಯುಸಿ ವಿದ್ಯಾರ್ಥಿಗಳು ತಮ್ಮ ಉತ್ತರ ಪತ್ರಿಕೆಯಲ್ಲಿ ಶುಭಸೂಚಕವಾದ 'ಓಂ' ಅಥವಾ 786 ಸಂಖ್ಯೆಯನ್ನು ಬರೆಯುವಂತಿಲ್ಲ ಎಂದು ಆದೇಶ ಹೊರಡಿಸಿದೆ.

ಒಂದು ವೇಳೆ ಓಂ ಅಥವಾ 786 ಸಂಖ್ಯೆಗಳನ್ನು ಬರೆದರೆ ಅಂತಹ ವಿದ್ಯಾರ್ಥಿಗಳನ್ನು ಅನರ್ಹಗೊಳಿಸಲಾಗುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಪರೀಕ್ಷಾ ಪ್ರಕ್ರಿಯೆಯಲ್ಲಿ ಧರ್ಮವನ್ನು ಹೊರಗಿಡುವ ಪ್ರಯತ್ನವಾಗಿ ಉತ್ತರಪ್ರದೇಶ ಪರೀಕ್ಷಾ ಮಂಡಳಿ ಈ ನಿರ್ಧಾರ ಕೈಗೊಂಡಿದೆ.

ಮೌಲ್ಯಮಾಪಕರಿಗೆ ಪರೀಕ್ಷಾರ್ಥಿಗಳು ಯಾವ ಧರ್ಮಕ್ಕೆ ಸೇರಿದ್ದಾರೆ ಎಂದು ಗೊತ್ತಾಗದಿರಲಿ. ವಿದ್ಯಾರ್ಥಿಗಳ ಧರ್ಮ ಮೌಲ್ಯಮಾಪನದ ಮೇಲೆ ಪ್ರಭಾವ ಬೀರದಿರಲಿ ಎಂಬ ಕಾರಣಕ್ಕೆ ಈ ಆದೇಶವನ್ನು ಹೊರಡಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com